Ballari | ದೇವಸಮುದ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಜನ ಸಭೆ

ಬಳ್ಳಾರಿ/ಕಂಪ್ಲಿ: ಸಮೀಪದ ದೇವಸಮುದ್ರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2025-26ನೇ ಸಾಲಿನಲ್ಲಿ 2,51,796 ರೂ. ನಿವ್ವಳ ಲಾಭ ಗಳಿಸಿದ್ದು, ಸಂಘದ ಆರ್ಥಿಕ ಪ್ರಗತಿಗೆ ಸದಸ್ಯರು ಮತ್ತು ರೈತರ ಸಹಕಾರ ಪ್ರಮುಖ ಕಾರಣವಾಗಿದೆ ಎಂದು ಮುಖ್ಯ ಕಾರ್ಯನಿರ್ವಾಹಕ ಎಸ್.ಎಸ್. ನಾಗರಾಜ ಹೇಳಿದರು.
ಗ್ರಾಮದ ಸರ್ಕಾರಿ ಶಾಲಾ ಕೊಠಡಿಯಲ್ಲಿ ಬುಧವಾರ ಸಂಘದ ಅಧ್ಯಕ್ಷ ಅಳ್ಳಳ್ಳಿ ಮಂಜುನಾಥ ಅವರ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಮಹಾಜನ ಸಭೆಯಲ್ಲಿ ಅವರು ವಾರ್ಷಿಕ ವರದಿ ಮಂಡಿಸಿದರು.
ಸಂಘವು ಪ್ರಸ್ತುತ 2,055 ಸದಸ್ಯರನ್ನು ಹೊಂದಿದ್ದು, 78.82 ಲಕ್ಷ ರೂ. ಶೇರು ಬಂಡವಾಳ ಹಾಗೂ 1.23 ಕೋಟಿ ರೂ. ಠೇವಣಿ ಸಂಗ್ರಹಿಸಿದೆ ಎಂದು ಮಾಹಿತಿ ನೀಡಿದರು.
2025-26ನೇ ಸಾಲಿನಲ್ಲಿ 604 ಸದಸ್ಯರಿಗೆ 4.92 ಕೋಟಿ ರೂ. ಕೆಸಿಸಿ ಬೆಳೆ ಸಾಲ, 9 ರೈತರಿಗೆ 40.58 ಲಕ್ಷ ರೂ. ಮಧ್ಯಮಾವಧಿ ಸಾಲ ಹಾಗೂ 146 ಸದಸ್ಯರಿಗೆ 90.29 ಲಕ್ಷ ರೂ. ಬಿಡಿಪಿ ಸಾಲ ವಿತರಿಸಲಾಗಿದೆ ಎಂದು ಆರ್ಥಿಕ ಪ್ರಗತಿ ವಿವರಿಸಿದರು.
ಸಂಘದ ಅಭಿವೃದ್ಧಿಗೆ ರೈತರು ಹಾಗೂ ಸದಸ್ಯರು ಮುಂದೆಯೂ ಇದೇ ರೀತಿಯ ಸಹಕಾರ ನೀಡಬೇಕು ಎಂದು ಅವರು ಮನವಿ ಮಾಡಿದರು.
ಸಭೆಯಲ್ಲಿ ಉಪಾಧ್ಯಕ್ಷೆ ಗಾದಿಗನೂರು ಹಂಪಮ್ಮ, ನಿರ್ದೇಶಕರಾದ ಕೆ. ತಿಪ್ಪೇರುದ್ರಪ್ಪ, ಸಿ.ಕೆ. ಸೋಮಶೇಖರ, ಜಿ. ಕಡೆಮನೆ ನಾಗರಾಜ, ಕೊರವರ ಹುಲುಗಪ್ಪ, ಈ. ಅನ್ನಪೂರ್ಣ, ಜಿ. ಗಣೇಶಗೌಡ, ಎಸ್.ಎಸ್. ಮಲ್ಲಿಕಾರ್ಜುನ, ಪಿ. ನೀಲಕಂಠಪ್ಪ, ನಾಯಕರ ತಿಪ್ಪೇಸ್ವಾಮಿ, ಸಣಾಪುರ ಪಾರ್ವತಿ, ಮುಖಂಡರಾದ ಅಳ್ಳಳ್ಳಿ ವಿರೇಶ, ಜಿ. ಲಿಂಗನಗೌಡ, ಜಿ. ಮಲ್ಲಿಗೌಡ, ನಾಯಕರ ಯಂಕೋಬ, ಅಮರೇಗೌಡ, ಸಂಘದ ಸಿಬ್ಬಂದಿ ಹಾಗೂ ರೈತರು ಉಪಸ್ಥಿತರಿದ್ದರು.






