Ballari | TAPCMS ನಾಮನಿರ್ದೇಶಿತ ಸದಸ್ಯರಾಗಿ ಕೋರಿ ಚನ್ನಬಸವರಾಜ ಅವಿರೋಧ ಆಯ್ಕೆ

ಬಳ್ಳಾರಿ/ಕಂಪ್ಲಿ: ಇಲ್ಲಿನ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ (TAPCMS) ನೂತನ ನಾಮನಿರ್ದೇಶಿತ ಸದಸ್ಯರಾಗಿ ಕೋರಿ ಚನ್ನಬಸವರಾಜ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಆಯ್ಕೆಯ ಬಳಿಕ ಮಾತನಾಡಿದ ನೂತನ ಸದಸ್ಯ ಕೋರಿ ಚನ್ನಬಸವರಾಜ, ‘ಸ್ಥಳೀಯ ಶಾಸಕ ಜೆ.ಎನ್. ಗಣೇಶ್ ಅವರ ಆದೇಶದಂತೆ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ. ಶ್ರೀನಿವಾಸರಾವ್ ಹಾಗೂ ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಪಿ. ಮೂಕಯ್ಯಸ್ವಾಮಿ ಅವರ ಮಾರ್ಗದರ್ಶನದಲ್ಲಿ ನನ್ನನ್ನು ಈ ಜವಾಬ್ದಾರಿಗೆ ಅವಿರೋಧವಾಗಿ ಆಯ್ಕೆ ಮಾಡಿರುವುದು ಅತ್ಯಂತ ಸಂತಸ ತಂದಿದೆ. ನಮಗೆ ನೀಡಿರುವ ಈ ಗೌರವಾನ್ವಿತ ಸ್ಥಾನಕ್ಕೆ ಯಾವುದೇ ಚ್ಯುತಿ ಬಾರದಂತೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ಸಂಘದ ಸಮಗ್ರ ಅಭಿವೃದ್ಧಿಗೆ ಶ್ರಮಿಸುವ ಜೊತೆಗೆ, ಸರ್ಕಾರದ ವಿವಿಧ ಯೋಜನೆಗಳನ್ನು ಅರ್ಹ ರೈತರಿಗೆ ತಲುಪಿಸಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು’ ಎಂದು ತಿಳಿಸಿದರು.
ಸಂಘದ ಮುಖ್ಯ ಕಾರ್ಯನಿರ್ವಾಹಕ ಕರೇಕಲ್ ವೀರೇಶ್, ಸಹಕಾರ ಸಂಘದ ಅಧ್ಯಕ್ಷ ಕಡೆಮನೆ ನಾಗರಾಜ, ಉಪಾಧ್ಯಕ್ಷೆ ಜಿ. ಅಯ್ಯಮ್ಮ, ನಿರ್ದೇಶಕರಾದ ಕೆ. ದೊಡ್ಡಬಸಪ್ಪ, ಅಳ್ಳಿ ನಾಗರಾಜ, ಪಿ. ಚೊಕ್ಕರಾವ್, ಅರಳೆ ಮುತ್ತಯ್ಯ, ಹನುಮಂತಪ್ಪ ಕುರುಬರು, ವಿ.ಬಿ. ನಾಗರಾಜ, ಆಂಜನೇಯಲು, ಗೌಡ್ರು ಅಂಜಿನಪ್ಪ, ಕೆ. ಭಾಸ್ಕರ್‌ರೆಡ್ಡಿ, ಕೆ. ರಾಧ ಹಾಗೂ ಸರ್ಕಾರಿ ನಾಮಿನಿ ಹೆಚ್. ಲಿಂಗಪ್ಪ ಉಪಸ್ಥಿತರಿದ್ದರು.
ಇವರೊಂದಿಗೆ ಪ್ರಮುಖ ಮುಖಂಡರಾದ ಕೆ. ಷಣ್ಮುಕಪ್ಪ, ಸಿ.ಆರ್. ಹನುಮಂತ, ವಾಲ್ಮೀಕಿ ರಘು, ಬಳೆ ಮಲ್ಲಿಕಾರ್ಜುನ, ಗಿರೀಶ, ಕುಮಾರ, ಮಾವಿನಹಳ್ಳಿ ಬಸವರಾಜ, ಅಮರೇಗೌಡ, ಸಣಾಪುರ ತಿಪ್ಪೇಸ್ವಾಮಿ ಸೇರಿದಂತೆ ಹಲವರು ಭಾಗವಹಿಸಿ ನೂತನ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದರು.






