ಬಳ್ಳಾರಿ ಜಿಲ್ಲಾ ಯೋಜನಾ ಸಮಿತಿ ಸದಸ್ಯರ ಚುನಾವಣೆ-2025 : ಅವಿರೋಧವಾಗಿ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿ ಪ್ರಕಟ

ಸಾಂದರ್ಭಿಕ ಚಿತ್ರ
ಬಳ್ಳಾರಿ : ಬಳ್ಳಾರಿ ಜಿಲ್ಲಾ ಯೋಜನಾ ಸಮಿತಿಗೆ ಪುರಸಭಾ ಕ್ಷೇತ್ರದಿಂದ ಚುನಾಯಿತ ಸದಸ್ಯರನ್ನು ಆಯ್ಕೆ ಮಾಡುವ ಸಂಬಂಧ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಾಗಿದೆ ಎಂದು ಚುನಾವಣಾಧಿಕಾರಿಯಾಗಿರುವ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹಾರೀಸ್ ಸುಮೇರ್ ತಿಳಿಸಿದ್ದಾರೆ.
ಬಳ್ಳಾರಿ ನಗರದ ಎಸ್.ಎನ್ ಪೇಟೆಯ ಕೆ.ಎಸ್.ಅಶೋಕ್ ಕುಮಾರ್, ಕೌಲ್ ಬಜಾರ್ ನ ಎಂ.ಗೋವಿಂದರಾಜುಲು, ನಿಯಾಜ್ ಅಹ್ಮದ್ ಟಿ. ಬಾಪೂಜಿನಗರದ ಉಮಾದೇವಿ ಶಿವರಾಜ, ಕೋಟೆ ಪ್ರದೇಶದ ಶಶಿಕಳಾ, ಕುರುಗೋಡಿನ ಕೊರವರ ನಾಗಭೂಷಣಂ, ಎನ್.ಗುರುಮೂರ್ತಿ, ನಟರಾಜ, ಸಂಡೂರಿನ ಕುರೇಕುಪ್ಪ ಗ್ರಾಮದ ಸೋಮಪ್ಪ.ಎಸ್., ಡಿ.ಬಸವನಗೌಡ, ವಿ.ಕಲ್ಗುಡಿಯಪ್ಪ ಆಯ್ಕೆಗೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
Next Story





