ಬಳ್ಳಾರಿ : ಗೌಳಿ ಬಾಯ್ಸ್ ಕಂಪ್ಲಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿ
ಕ್ರೀಡೆ ಸೌಹಾರ್ದತೆಯ ಪ್ರತೀಕ: ಜಗದೀಶ್ ಹೊಸಕೋಟೆ

ಕಂಪ್ಲಿ (ಬಳ್ಳಾರಿ): ಕ್ರೀಡೆಗಳು ಕೇವಲ ದೈಹಿಕ ಫಿಟ್‌ನೆಸ್‌ಗೆ ಸೀಮಿತವಾಗಿರದೆ ಯುವಜನರಲ್ಲಿ ಒಗ್ಗಟ್ಟು, ಶಿಸ್ತು ಹಾಗೂ ಸೌಹಾರ್ದತೆಯನ್ನು ಹೆಚ್ಚಿಸುತ್ತವೆ ಎಂದು ವೀರಶೈವ ಲಿಂಗಾಯತ ಮಹಾವೇದಿಕೆಯ ಜಿಲ್ಲಾಧ್ಯಕ್ಷ ಜಗದೀಶ್ ಹೊಸಕೋಟೆ ಹೇಳಿದರು.
ತಾಲೂಕಿನ ಮುದ್ದಾಪುರದ ಯಲ್ಲಮ್ಮ ಕ್ಯಾಂಪ್ ನಂ. 10 ರ ಮೈದಾನದಲ್ಲಿ ಆಯೋಜಿಸಿದ್ದ 'ಗೌಳಿ ಬಾಯ್ಸ್ ಕಂಪ್ಲಿ ಪ್ರೀಮಿಯರ್ ಲೀಗ್' ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಭಾಗದ ಯುವಕರಲ್ಲಿ ಅದ್ಭುತ ಕ್ರೀಡಾ ಪ್ರತಿಭೆಯಿದೆ. ಇಂತಹ ಸ್ಥಳೀಯ ಲೀಗ್ ಪಂದ್ಯಾವಳಿಗಳು ಆ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಲು ಉತ್ತಮ ವೇದಿಕೆಯಾಗುತ್ತವೆ. ಆಟಗಾರರು ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಕ್ರೀಡಾ ಮನೋಭಾವದಿಂದ ಆಡಬೇಕು ಎಂದು ಕರೆ ನೀಡಿದರು.
ಕರ್ನಾಟಕ ಗೌಳಿ ಸಮಾಜದ ಅಧ್ಯಕ್ಷ ಗೌಳಿ ಕುಮಾರ್ ಹಾಗೂ ಕಂಪ್ಲಿ ತಾಲೂಕು ಕರವೇ (ನಾರಾಯಣಗೌಡ ಬಣ) ಅಧ್ಯಕ್ಷ ಬಳೆ ಮಲ್ಲಿಕಾರ್ಜುನ ಮಾತನಾಡಿದರು.
ಹೊಸಪೇಟೆ ಗೌಳೇರ್ ಹಟ್ಟಿ ತಂಡವು ವಿಜೇತರಾಗಿ ಟ್ರೋಫಿ ಮುಡಿಗೇರಿಸಿಕೊಂಡರೆ, 'ಗೌಳಿ ಬಾಯ್ಸ್ ಮುದ್ದಾಪುರ' ತಂಡವು ರನ್ನರ್-ಅಪ್ ಪ್ರಶಸ್ತಿಗೆ ಭಾಜನವಾಯಿತು. ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳು ವಿಜೇತ ಹಾಗೂ ರನ್ನರ್-ಅಪ್ ತಂಡಗಳಿಗೆ ಆಕರ್ಷಕ ಟ್ರೋಫಿ ಮತ್ತು ಬಹುಮಾನಗಳನ್ನು ವಿತರಿಸಿದರು. ಸುತ್ತಮುತ್ತಲಿನ ನೂರಾರು ಕ್ರೀಡಾಭಿಮಾನಿಗಳು ಪಂದ್ಯಾವಳಿಗೆ ಸಾಕ್ಷಿಯಾಗಿದ್ದರು.
ಕಾರ್ಯಕ್ರಮದಲ್ಲಿ ಗೌಳಿ ಪಂಪಾಪತಿ, ಹಂಪರೆಡ್ಡಿ, ರಾಜ ಮೆಟ್ರಿ, ಶಂಭುಲಿಂಗ, ಮಂಜುನಾಥ, ಬಿ. ರಾಜಾವಲಿ, ಶಿವಯ್ಯ, ಗುರು, ಮೌಲಹುಸೇನ್, ಗೌಳಿ ಸಮಾಜದ ಮುಖ್ಯಸ್ಥರಾದ ಗಂಗಾಧರ, ರುದ್ರೇಶ್, ಶಿವಯ್ಯ, ರಮೇಶ್, ಲೋಕೇಶ್, ಪಂಪಾಪತಿ, ಬಸವರಾಜ ಮುದ್ದಾಪುರ, ಮಲ್ಲಿಕಾರ್ಜುನ, ಬಸವರಾಜ, ಗಂಗಾಧರ ಹೊಸಪೇಟೆ ಸೇರಿದಂತೆ ಗೌಳಿ ಸಮಾಜದ ಯುವ ಮುಖಂಡರು ಇದ್ದರು.






