ಬಳ್ಳಾರಿ ಗುಂಪು ಘರ್ಷಣೆ | 10 ಮಂದಿಯ ಬಂಧನ

ಬಳ್ಳಾರಿ: ಬ್ಯಾನರ್ ಕಟ್ಟುವ ವಿಚಾರವಾಗಿ ಬಳ್ಳಾರಿ ನಗರದ ಹವಂಬಾವಿಯಲ್ಲಿ ಗುರುವಾರ ರಾತ್ರಿ ನಡೆದ ಘರ್ಷಣೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಎಂಬವರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ 10 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಕಾರ್ತಿಕ್, ಮುಕ್ಕಳ, ಇನಯಾತುಲ್ಲ, ರಾಜು, ಮುಸ್ತಫ, ಶ್ರೀಕಾಂತ್, ಮುಹಮ್ಮದ್ ರಸೂಲ್, ಬಾಬು, ವೆಂಕಟೇಶ್ ಹಾಗೂ ಮಾಬಾಷಾ ಬಂಧಿತ ಆರೋಪಿಗಳು. ಇವರನ್ನು ಬಂಧಿಸಿರುವ ಬ್ರೂಸ್'ಪೇಟೆ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಲು ಸಿದ್ಧತೆ ನಡೆಸುತ್ತಿದ್ದಾರೆ.
ಪ್ರಕರಣದ ತನಿಖೆ ಮುಂದುವರಿದಿದೆ.
Next Story





