ಬಳ್ಳಾರಿ ಗುಂಪು ಘರ್ಷಣೆ | ಎಸ್‌ಪಿ ಪವನ್ ನೆಜ್ಜೂರ್ ಅಮಾನತು

ಬಳ್ಳಾರಿ: ಗುಂಪು ಘರ್ಷಣೆ ಹಿನ್ನೆಲೆ ಬಳ್ಳಾರಿ ಎಸ್‌ಪಿ ಪವನ್ ನೆಜ್ಜೂರ್ ಅವರನ್ನು ಅಮಾನತು ಮಾಡಿ ಡಿಪಿ ಎಆರ್ ನ ಸರಕಾರದ ಅಧೀನ ಕಾರ್ಯದರ್ಶಿ ಆದೇಶವನ್ನು ಹೊರಡಿಸಿದ್ದಾರೆ.
ಗುರುವಾರ ಬಳ್ಳಾರಿ ಜಿಲ್ಲೆಯ ನೂತನ ಎಸ್‌ಪಿ ಆಗಿ ಪವನ್ ನೆಜ್ಜೂರ್ ಅಧಿಕಾರ ವಹಿಸಿಕೊಂಡಿದ್ದರು. ಇದಾದ ಮೂರೇ ಗಂಟೆಯೊಳಗೆ ರೆಡ್ಡಿ ಬಣಗಳ ನಡುವೆ ಬ್ಯಾನರ್ ವಿಚಾರಕ್ಕೆ ಗಲಾಟೆ ತಾರಕಕ್ಕೇರಿ ರಾಜಶೇಖರ ಎಂಬಾತನ ಹತ್ಯೆಯಾಗಿತ್ತು. ಈ ಹಿನ್ನೆಲೆ ಡಿಪಿಎಆರ್ ನ ಸರಕಾರದ ಅಧೀನ ಕಾರ್ಯದರ್ಶಿ ಕೆ.ವಿ. ಅಶೋಕ್ ಅವರು ಪವನ್ ನೆಜ್ಜೂರ್ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
Next Story





