Ballari | ರೋಗಿಗಳಿಗೆ ಹಣ್ಣು ವಿತರಿಸುವ ಮೂಲಕ ಸಂಸದ ಈ.ತುಕಾರಾಂ ಜನ್ಮದಿನ ಆಚರಣೆ

ಸಂಡೂರು/ಬಳ್ಳಾರಿ: ಅಖಂಡ ಬಳ್ಳಾರಿ ಜಿಲ್ಲೆಯ ಸಂಸದ ಈ.ತುಕಾರಾಂ ಅವರ ಜನ್ಮದಿನವನ್ನು ಸಂಡೂರು ತಾಲೂಕಿನ ತ್ಯಾಗದಾಳ್ ಹಾಗೂ ಬಂಡ್ರಿ ಗ್ರಾಮಗಳಲ್ಲಿ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಸರಳ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಯಿತು.
ತ್ಯಾಗದಾಳ್ ಗ್ರಾಮದಲ್ಲಿ ಗಿಡ ನೆಡುವ ಮೂಲಕ ಪರಿಸರ ಸಂರಕ್ಷಣೆಯ ಮಹತ್ವವನ್ನು ಸಾರಲಾಯಿತು. ಸಂಸದ ಈ. ತುಕಾರಾಂ ಅವರು ನೀಡಿರುವ ಪರಿಸರ ಕಾಳಜಿಯ ಸಂದೇಶವನ್ನು ಅನುಸರಿಸಿ ಕಾರ್ಯಕರ್ತರು ಗಿಡಗಳನ್ನು ನೆಟ್ಟು ಪರಿಸರ ಸಂರಕ್ಷಣೆಗೆ ತಮ್ಮ ಬದ್ಧತೆಯನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಸಾಮಾಜಿಕ ಜಾಲತಾಣ ಸಂಡೂರು ಅಧ್ಯಕ್ಷ ಆಸೀಫ್ ದೊಡ್ಮನೆ, ಕಾಂಗ್ರೆಸ್ ಕಾರ್ಯಕರ್ತರಾದ ಖಾಜಾ ಹುಸೇನ್, ಸಮೀರ್ ಭಾಷಾ, ಇಮ್ರಾನ್, ದಾದಾ ಖಲಂದರ್ ಹಾಗೂ ಅಸ್ಲಾಂ ದೊಡ್ಮನೆ, ನಿಜ್ಭ ಮತ್ತು ನಬಿಯ ಉಪಸ್ಥಿತರಿದ್ದರು.
ಬಳಿಕ ಬಂಡ್ರಿ ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳಿಗೆ ಹಣ್ಣು-ಹಂಪಲು ಹಾಗೂ ಬ್ರೆಡ್ ವಿತರಿಸುವ ಮೂಲಕ ಸಂಸದ ಈ. ತುಕಾರಾಂ ಅವರ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಕಣವಿಹಳ್ಳಿ ಭರ್ಮಪ್ಪ, ಅಹಿಂದ ತಾಲೂಕು ಯುವ ಘಟಕದ ಅಧ್ಯಕ್ಷರು, ಕೆಪಿಸಿಸಿ ಸಾಮಾಜಿಕ ಜಾಲತಾಣ ಸಂಡೂರು ಅಧ್ಯಕ್ಷ ಆಸೀಫ್ ದೊಡ್ಮನೆ, ಕಾಂಗ್ರೆಸ್ ಕಾರ್ಯಕರ್ತರಾದ ಬಸವರಾಜ್ ಕೆ., ತಿಪ್ಪೇಸ್ವಾಮಿ, ಶಿವಣ್ಣ ಡೊಂಬಿ, ನಾಗರಾಜ್ ಸೇರಿದಂತೆ ಹಲವರು ಭಾಗವಹಿಸಿ ಸಂಸದರಿಗೆ ಶುಭಾಶಯ ಕೋರಿದರು.






