Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ಬಳ್ಳಾರಿ
  4. Ballari | ಸಮೃದ್ಧ ಮಳೆ-ಬೆಳೆಗಾಗಿ...

Ballari | ಸಮೃದ್ಧ ಮಳೆ-ಬೆಳೆಗಾಗಿ ಕಂಪ್ಲಿಯಲ್ಲಿ ಕವಿಗಳಿಂದ ಕಾವ್ಯ ಪ್ರಾರ್ಥನೆ

ವಾರ್ತಾಭಾರತಿವಾರ್ತಾಭಾರತಿ24 Aug 2026 7:31 PM IST
share
Ballari | ಸಮೃದ್ಧ ಮಳೆ-ಬೆಳೆಗಾಗಿ ಕಂಪ್ಲಿಯಲ್ಲಿ ಕವಿಗಳಿಂದ ಕಾವ್ಯ ಪ್ರಾರ್ಥನೆ

ಬಳ್ಳಾರಿ/ಕಂಪ್ಲಿ: ಸಮೃದ್ಧ ಮಳೆ ಹಾಗೂ ಉತ್ತಮ ಬೆಳೆಗಾಗಿ ಸಂಕಲ್ಪಿಸಿ, ಇದೇ ಮೊದಲ ಬಾರಿಗೆ ಪಟ್ಟಣದ ಸಾಹಿತ್ಯ ಸಿರಿ ಪ್ರತಿಷ್ಠಾನದ ವತಿಯಿಂದ ಶ್ರೀ ವಾಸವಿ ಕನ್ನಡ ಹಿರಿಯ ಪ್ರಾಥಮಿಕ ಅನುದಾನಿತ ಶಾಲೆಯಲ್ಲಿ ‘ಮಳೆಗಾಗಿ ಕವಿಗೋಷ್ಠಿ’ಯನ್ನು ಅದ್ದೂರಿಯಾಗಿ ಆಯೋಜಿಸಲಾಯಿತು.

ವಾಸವಿ ವಿದ್ಯಾಸಂಸ್ಥೆಯ ಉಪಾಧ್ಯಕ್ಷ ವಿ. ರಾಮಲಿಂಗಯ್ಯ ಶ್ರೇಷ್ಠಿ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿ, ಮಳೆಗಾಗಿ ಕವಿಗೋಷ್ಠಿ ಆಯೋಜಿಸಿರುವುದು ಸಾಹಿತ್ಯದ ದೃಷ್ಟಿಯಿಂದ ಔಚಿತ್ಯಪೂರ್ಣವಾಗಿದೆ. ಮಳೆ ಸಮೃದ್ಧವಾಗಿ ಸುರಿಯಬೇಕು ಹಾಗೂ ಮಳೆ ಕೊರತೆಯ ಬಗ್ಗೆ ವೈಚಾರಿಕವಾಗಿ ಚಿಂತಿಸುವ ನಿಟ್ಟಿನಲ್ಲಿ ಯುವಜನತೆ ಮುಂದಾಗಬೇಕು ಎಂದು ಹೇಳಿದರು.

ಬಳ್ಳಾರಿಯ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಡಾ. ಯು. ಶ್ರೀನಿವಾಸಮೂರ್ತಿ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಪದ್ಯವಾಗಲಿ, ಗದ್ಯವಾಗಲಿ ಸಮಾಜಕ್ಕೆ ಸ್ಪಂದಿಸುವಂತಿರಬೇಕು. ಸಮಾಜ ಕಟ್ಟುವ ಮನಸ್ಸು ಸಾಹಿತ್ಯಕ್ಕೆ ಆಮ್ಲಜನಕವಿದ್ದಂತೆ. ಕವಿಗಳು ತಮ್ಮ ಭಾವನೆಗಳನ್ನು ಕವಿತೆಗಳ ಮೂಲಕ ಪರಿಣಾಮಕಾರಿಯಾಗಿ ವ್ಯಕ್ತಪಡಿಸಬೇಕು ಎಂದರು.

ಮೊಬೈಲ್ ಯುಗದಲ್ಲಿ ಮನುಷ್ಯನ ಮನಸ್ಸು ತನ್ನ ಹಿಡಿತದಲ್ಲಿಯೇ ಇಲ್ಲದಂತಾಗಿದೆ. ಇಂತಹ ಸಂದರ್ಭದಲ್ಲಿ ಕವಿಗಳು ಜಾಗೃತಿ ಮೂಡಿಸುವ ಕವಿತೆಗಳನ್ನು ರಚಿಸಬೇಕು. ಕವಿತೆಗಳು ಗಟ್ಟಿತನದಿಂದ ಕೂಡಿರಬೇಕು. ಮಳೆ ವರ್ಣಿಸುವುದು ಒಂದು ಹಂತವಾದರೆ, ಮಳೆಗಾಗಿ ಬೇಡುವ ಪರಿಸ್ಥಿತಿ ಮತ್ತೊಂದು ಹಂತವಾಗಿದೆ. ಹೀಗಾಗಿ ಮುಂದಿನ ಪೀಳಿಗೆಗೆ ಜಾಗೃತಿ ಮೂಡಿಸುವ ಕವಿತೆಗಳು ಅಗತ್ಯ ಎಂದು ಅಭಿಪ್ರಾಯಪಟ್ಟರು.

ಪ್ರತಿಷ್ಠಾನದ ನಿರ್ದೇಶಕ ಜಿ. ತಿಪ್ಪಯ್ಯಶ್ರೇಷ್ಠಿ, ಅಧ್ಯಕ್ಷ ಬಿ. ಪ್ರಕಾಶ್ ಹಾಗೂ ಕಾರ್ಯಾಧ್ಯಕ್ಷ ಷಣ್ಮುಖಪ್ಪ ಚಿತ್ರಗಾರ್ ಮಾತನಾಡಿದರು.

ಕವಿಗೋಷ್ಠಿಯಲ್ಲಿ ಕವಿಗಳು ಮಳೆಯ ಮಹತ್ವ, ರೈತರ ಸಂಕಷ್ಟ ಹಾಗೂ ಪರಿಸರದ ಕುರಿತು ಕವನಗಳನ್ನು ವಾಚಿಸಿದರು. ಎಸ್.ಎಂ. ಪ್ರಭಾವತಿ, ವೀರಮ್ಮ ನಾಗರಾಜ, ರಮೇಶ್ ಸಾಗೇನಹಳ್ಳಿ, ಡಾ. ಬಿ. ಸುನಿಲ್, ಸಿ.ಡಿ. ಕುಮಾರ್, ಮದುಕಪ್ಪ ನೆಲಜೇರಿ ಹಾಗೂ ಬಡಿಗೇರ ಜಿಲಾನ್ ಅವರ ಕವಿತೆಗಳು ಗಮನ ಸೆಳೆದವು. ಮಳೆಗಾಗಿ ರೈತರ ನಿರೀಕ್ಷೆ, ಬರದಿಂದ ಎದುರಾಗುವ ಸಂಕಷ್ಟ ಹಾಗೂ ಪ್ರಕೃತಿಯ ಮಹತ್ವ ಕವಿತೆಗಳಲ್ಲಿ ಪ್ರತಿಧ್ವನಿಸಿತು.

ಕವಿಗೋಷ್ಠಿಯಲ್ಲಿ ಬಿ. ಪ್ರಕಾಶ್, ಪೀರಾಸಾಬ್ ಹಂಚಿನಾಕ್ ಹೀರಾಪಲಿ, ರಾಜು ಬಿಲಂಕರ್, ಎಸ್. ಶಾಮಸುಂದರರಾವ್, ಜಿಲಾನ್ ಸಾಬ್ ಬಡಿಗೇರ, ಸಾಹಿತ್ಯ ಬಿಲಂಕರ್, ಚಂದ್ರಯ್ಯ ಸೊಪ್ಪಿಮಠ, ಅಶೋಕ ಕುನೂರು, ಎಸ್. ರಾಮಪ್ಪ, ಪರಶುರಾಮ ಪವಾರ್, ಸಂತೋಷ್ ಸೋಗಿ, ಬಡಿಗಿ ದೊಡ್ಡ ಮಂಜುನಾಥ ಸೇರಿದಂತೆ ಹಲವು ಕವಿಗಳು ಕವಿತೆ ವಾಚಿಸಿದರು. ಆನ್‌ಲೈನ್ ಮೂಲಕ ಎಚ್.ಟಿ. ಗಿರೀಶ್, ಎನ್.ಸಿ. ಶಿವಕುಮಾರ್ ಹಾಗೂ ಬೇರ್ಗಿ ಜಯಶ್ರೀ ಭಾಗವಹಿಸಿದರು.

ಜ್ಞಾನಿತಾರೆಡ್ಡಿ ಪ್ರಾರ್ಥಿಸಿದರು. ಚಂದ್ರಯ್ಯ ಸೊಪ್ಪಿಮಠ ಸ್ವಾಗತಿಸಿದರು. ಎಸ್. ಶಾಮಸುಂದರರಾವ್ ವಂದಿಸಿದರು. ರಾಜು ಬಿಲಂಕರ್ ನಿರೂಪಿಸಿದರು.

Tags

Ballari
share
ವಾರ್ತಾಭಾರತಿ
ವಾರ್ತಾಭಾರತಿ
Next Story
X