ಬಳ್ಳಾರಿ | ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪ್ರತಿಭಾ ಕಾರಂಜಿ ಪೂರಕ : ಮಾಯಮ್ಮ

ಬಳ್ಳಾರಿ / ಕಂಪ್ಲಿ: ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪ್ರತಿಭಾ ಕಾರಂಜಿ ಪೂರಕವಾಗಿದೆ ಎಂದು ಗ್ರಾಪಂ ಅಧ್ಯಕ್ಷೆ ಮಾಯಮ್ಮ ಹೇಳಿದರು.
ತಾಲೂಕಿನ ದೇವಸಮುದ್ರ ಗ್ರಾಮದ ಸ.ಹಿ.ಪ್ರಾ ಶಾಲೆಯಲ್ಲಿ ದೇವಸಮುದ್ರ ಸಂಪನ್ಮೂಲ ಕೇಂದ್ರದಿಂದ ಬುಧವಾರ ಆಯೋಜಿಸಿದ್ದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ಶಿಕ್ಷಣ ಇಲಾಖೆ ಮಕ್ಕಳ ಭವಿಷ್ಯ ರೂಪಿಸುವ ಇಲಾಖೆಯಾಗಿದ್ದು, ಮಕ್ಕಳ ಪ್ರತಿಭೆ ಹೊರ ಹಾಕುವಲ್ಲಿ ಶಿಕ್ಷಕರ ಪಾತ್ರ ಮುಖ್ಯವಾಗಿದೆ ಎಂದರು.
ಸಿಆರ್‌ಪಿಯಾಗಿ ಕರ್ತವ್ಯ ನಿರ್ವಹಿಸಿದ ವೀರೇಶರವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯ ನಾಯಕರ ಯಂಕೋಬ, ಮುಖ್ಯಗುರು ಹೆಚ್.ದೊಡ್ಡಬಸಪ್ಪ ನಿರೂಪಿಸಿದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಹನುಮಂತಪ್ಪ, ಪ್ರಧಾನ ಕಾರ್ಯದರ್ಶಿ ಸುನಿತಾ, ಇಸಿಒ ರೇವಣ್ಣ, ಸಿಆರ್ಪಿಗಳಾದ ಕರುಣಾಕರ, ಭೂಮೇಶ್ವರ, ಗಂಗಾಧರ, ಉಪ ಪ್ರಾಚಾರ್ಯೆ ಸುಜಾತ, ಎಸ್ಡಿಎಂಸಿ ಅಧ್ಯಕ್ಷ ಹನುಮೇಶ, ಸದಸ್ಯ ಯರ್ರಿಸ್ವಾಮಿ, ಜಿಪಿಟಿ ಸಂಘದ ಅಧ್ಯಕ್ಷ ಮಂಜುನಾಥ, ಮುಖ್ಯಗುರುಗಳಾದ ಮಲ್ಲಿಕಾರ್ಜುನ, ನಾಗಪ್ಪ, ಪಾಟೇಲ್, ಮುಖಂಡರಾದ ಹೆಚ್. ಗುಂಡಪ್ಪ, ರುದ್ರಗೌಡ, ಜಡೆಪ್ಪ, ಆನಂದ, ವೆಂಕನಗೌಡ, ಪಂಪಾಪತಿ ಸೇರಿದಂತೆ ಅನೇಕರಿದ್ದರು.







