Ballari | ಸುನ್ನಿ ಸ್ಟೂಡೆಂಟ್ಸ್ ಫೆಡರೇಷನ್‌ನ ಯುನಿಟ್ ಮಟ್ಟದ ಸಾಹಿತ್ಯೋತ್ಸವ ಕಾರ್ಯಕ್ರಮ

ಬಳ್ಳಾರಿ / ಸಿರುಗುಪ್ಪ: ತಾಲೂಕಿನ ಸುನ್ನಿ ಸ್ಟೂಡೆಂಟ್ಸ್ ಫೆಡರೇಷನ್ (ಎಸ್‌ಎಸ್‌ಎಫ್) ವತಿಯಿಂದ ಯುನಿಟ್ ಮಟ್ಟದಲ್ಲಿ ಆಯೋಜಿಸಿದ್ದ ಸಾಹಿತ್ಯೋತ್ಸವವು ಮುದ್ದಟ್ಟನೂರು ಗ್ರಾಮದ ಖುರ್ರತ್ತುಸ್ಸಾದಾತ್ ಸುನ್ನೀ ಮದರಸದಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿತು.
ವಿದ್ಯಾರ್ಥಿಗಳಲ್ಲಿ ಅಡಗಿರುವ ಸಾಹಿತ್ಯ ಹಾಗೂ ಕಲಾತ್ಮಕ ಪ್ರತಿಭೆಗಳನ್ನು ಹೊರತರಲು ಉದ್ದೇಶಿಸಿ ಆಯೋಜಿಸಿದ್ದ ಈ ಸ್ಪರ್ಧಾತ್ಮಕ ಕಾರ್ಯಕ್ರಮದಲ್ಲಿ ಯುನಿಟ್ ವ್ಯಾಪ್ತಿಯ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದರು.
ಕಾರ್ಯಕ್ರಮದ ಅಂಗವಾಗಿ ಇಸ್ಲಾಮಿಕ್ ಗೀತೆ, ಭಾಷಣ, ಮಾತುಕತೆ, ಕ್ವಿಜ್, ಕವನ ರಚನೆ, ಕ್ಯಾಲಿಗ್ರಫಿ ಸೇರಿದಂತೆ ವಿವಿಧ ಸಾಹಿತ್ಯ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ನಡೆದವು. ವಿವಿಧ ವಿಭಾಗಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಸಮಾರೋಪ ಸಮಾರಂಭದಲ್ಲಿ ಬಹುಮಾನ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಎಸ್‌ಎಸ್‌ಎಫ್ ಮುಖಂಡರಾದ ಸಿದ್ದೀಕ್ ಸಖಾಫಿ, ನವಾಝ್ ಸಖಾಫಿ, ಆಮಿರ್ ಅಶ್ಅರೀ ಬನ್ನೂರು, ಹಿರಿಯರಾದ ಹುಸೈನ್ ಸಾಬ್, ವಲೀ ಸಾಬ್, ಹೊನ್ನೂರು ಸಾಬ್, ಖಲೀಲ್ ಸಾಬ್, ರಂಜಾನ್ ಸಾಬ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.




