ಬಳ್ಳಾರಿ| ಡಿಸಿಸಿ ಬ್ಯಾಂಕ್ ಕೇಂದ್ರ ಕಚೇರಿಯಲ್ಲಿ 106ನೇ ಸಂಸ್ಥಾಪನಾ ದಿನಾಚರಣೆ

ವಿಜಯನಗರ : ಬಳ್ಳಾರಿ ಡಿಸಿಸಿ ಬ್ಯಾಂಕಿನ 106ನೇ ಸಂಸ್ಥಾಪನಾ ದಿನಾಚರಣೆ ಕೇಂದ್ರ ಕಚೇರಿಯಲ್ಲಿ ಅಧ್ಯಕ್ಷರಾದ ತಿಪ್ಪೇಸ್ವಾಮಿಯವರ ನೇತೃತ್ವದಲ್ಲಿ ನಡೆಯಿತು.
ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ತಿಪ್ಪೇಸ್ವಾಮಿ ಅವರು,106ನೇ ಸಂಸ್ಥಾಪನಾ ದಿನವನ್ನು ಕೇಂದ್ರ ಕಚೇರಿ ಸೇರಿದಂತೆ 33 ಶಾಖೆಗಳಲ್ಲಿ ಕೂಡ ಅದ್ದೂರಿ ಆಚರಣೆಗೆ ಕರೆ ನೀಡಲಾಗಿತ್ತು. ಬಳ್ಳಾರಿ ಡಿಸಿಸಿ ಬ್ಯಾಂಕನ್ನು ಇಲ್ಲಿಯವರೆಗೆ ನಡೆಸಿಕೊಂಡು ಬಂದಂತಹ ಎಲ್ಲಾ ಅಧ್ಯಕ್ಷರ ದೂರದೃಷ್ಟಿ, ಆಡಳಿತ ಮಂಡಳಿಗಳ ಸಹಕಾರ, ನೌಕರರ ಪರಿಶ್ರಮವನ್ನು ಸ್ಮರಿಸಿದರು.
ಈ ವೇಳೆ ಮುಖ್ಯಕಾರ್ಯನಿರ್ವಹಣಾಧಿಕಾರಿಗಳಾದ ಜಯಪ್ರಕಾಶ್ ಬಿ ಹಾಗೂ ಕೇಂದ್ರ ಕಚೇರಿಯ ಎಲ್ಲಾ ವಿಭಾಗಗಳ ಉಪಪ್ರಧಾನ ವ್ಯವಸ್ಥಾಪಕರು, ನೌಕರರು ಹಾಗೂ ಸ್ಥಳೀಯ ಬ್ಯಾಂಕ್ ಮತ್ತು ಸಹಕಾರ ಸಂಘಗಳ ಆಡಳಿತ ಮಂಡಳಿ ಸದಸ್ಯರು ಹಾಗೂ ನೌಕರರು ಉಪಸ್ಥಿತರಿದ್ದರು.
Next Story





