ಬಳ್ಳಾರಿ | ವಿಧಾನ ಪರಿಷತ್ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಮತದಾರರ ಮಾಹಿತಿ, ದೂರು ಕೇಂದ್ರ ಸ್ಥಾಪನೆ

ಬಳ್ಳಾರಿ : ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತರ ಕಾರ್ಯಾಲಯದಲ್ಲಿ ಕನ್ನಡ ರಾಜ್ಯ ವಿಧಾನ ಪರಿಷತ್ ಈಶಾನ್ಯ ಶಿಕ್ಷಕರ ಕ್ಷೇತ್ರದ 2026ನೇ ಸಾಲಿನ ಚುನಾವಣೆ ಸಂಬಂಧಿಸಿದಂತೆ ದೂರು ಸ್ವೀಕರಿಸಲು ಮತ್ತು ಮತದಾರರಿಗೆ ಮಾಹಿತಿ ನೀಡಲು ಕೋಣೆ ಸಂಖ್ಯೆ 17 ರಲ್ಲಿ ದೂರು ಮೇಲ್ವಿಚಾರಣೆ ತಂಡ ಹಾಗೂ ಮತದಾರರ ಮಾಹಿತಿ ಮತ್ತು ಸಲಹಾ ಕೇಂದ್ರವನ್ನು ಸ್ಥಾಪಿಸಲಾಗಿದ್ದು, ಈ ಕೇಂದ್ರದ ದೂರವಾಣಿ ಸಂಖ್ಯೆ 08472-200255ಗೆ ಸಾರ್ವಜನಿಕರು ಮತದಾರರ ನೋಂದಣಿ, ಚುನಾವಣಾ ಮಾಹಿತಿಗಳು ಹಾಗೂ ಯಾವುದೇ ದೂರುಗಳನ್ನು ದಾಖಲಿಸಬಹುದು ಎಂದು ಕ್ಷೇತ್ರದ ಚುನಾವಣಾಧಿಕಾರಿಯೂ ಆಗಿರುವ ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತ ಜಹೀರಾ ನಸೀಮ ತಿಳಿಸಿದ್ದಾರೆ.
ಅರ್ಹತಾ ದಿನಾಂಕ 01.11.2025ಕ್ಕೆ ಅನ್ವಯವಾಗಿ ಮತದಾರರ ಪಟ್ಟಿಯನ್ನು ಸಿದ್ಧಪಡಿಸಿ, 25.11.2025 ರಂದು ಕರಡು ಪಟ್ಟಿಯನ್ನು ಪ್ರಕಟಿಸಿ, 25.11.2025 ರಿಂದ 10.12.2025 ರವರೆಗೆ ಆಕ್ಷೇಪಣೆಗಳಿಗೆ ಅವಕಾಶ ನೀಡಲಾಗಿದ್ದು, 30.12.2025 ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ.
ಮತ್ತಷ್ಟು ಸಹಾಯಕ್ಕಾಗಿ ಕೇಂದ್ರದಲ್ಲಿ ನೇಮಕಗೊಂಡ ಅಧಿಕಾರಿಗಳು ಮತ್ತು ಸಿಬ್ಬಂದಿಯಾದ ಪ್ರಸನ್ನಕುಮಾರ (ಬಜೇಟ್ ಆಫೀಸರ್, ಮೊ.9448712912), ಅಶೋಕ (ಶಿರಸ್ತೇದಾರ, ಮೊ.9731720711), ರವಿಕುಮಾರ ಗಾಜರೆ (ಶಿರಸ್ತೇದಾರ, ಮೊ.9480149223), ಶರಣಪ್ಪ ಶ್ರೀಗಿರಿ (ದ್ವಿತೀಯ ದರ್ಜೆ ಸಹಾಯಕ, ಮೊ.7406111177), ಪ್ರವೀಣ ಕುಲಕರ್ಣಿ (ದ್ವಿತೀಯ ದರ್ಜೆ ಸಹಾಯಕ, ಮೊ.7829766596) ಸಂಪರ್ಕಿಸಬೇಕು.
ಪ್ರತಿವೀಕ್ಷಣೆ ತಂಡವು ಲಿಖಿತ, ಮೌಖಿಕ ಮತ್ತು ದೂರವಾಣಿ ಮೂಲಕ ಸ್ವೀಕೃತ ಎಲ್ಲಾ ದೂರುಗಳನ್ನು ದಾಖಲಿಸಿ ನಿಯಮಾನುಸಾರ ಕ್ರಮ ಕೈಗೊಳ್ಳಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.







