ಬಳ್ಳಾರಿ | ಕಂಪ್ಲಿ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಕಡೆಮನೆ ನಾಗರಾಜ, ಉಪಾಧ್ಯಕ್ಷರಾಗಿ ಜಿ.ಅಯ್ಯಮ್ಮ ಅವಿರೋಧ ಆಯ್ಕೆ

ಬಳ್ಳಾರಿ / ಕಂಪ್ಲಿ : ತೀವ್ರ ಕುತೂಹಲ ಕೆರಳಿಸಿದ್ದ ಕಂಪ್ಲಿ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಕಡೆಮನೆ ನಾಗರಾಜ ಹಾಗೂ ಉಪಾಧ್ಯಕ್ಷರಾಗಿ ಜಿ.ಅಯ್ಯಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇಲ್ಲಿನ ಸಂಘದ ಕಚೇರಿಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು. ಈ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕಡೆಮನೆ ನಾಗರಾಜ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಜಿ.ಅಯ್ಯಮ್ಮ ಇವರು ತಲಾ ಒಬ್ಬರೇ ನಾಮಪತ್ರ ಸಲ್ಲಿಸಿದ ಹಿನ್ನಲೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆಂದು ರಿಟರ್ನಿಂಗ್ ಅಧಿಕಾರಿ ರಾಮು ಘೋಷಿಸುವ ಜೊತೆಗೆ ಸಹಕಾರ ಸಂಘದ ಅಭಿವೃದ್ಧಿಗೆ ಮುಂದಾಗಬೇಕು ಎಂದರು.
ಚುನಾವಣೆ ಪ್ರಕ್ರಿಯೆ ವೇಳೆ ಸಹಾಯಕ ರಿಟರ್ನಿಂಗ್ ಅಧಿಕಾರಿ ರಮೇಶ, ಮುಖ್ಯಕಾರ್ಯನಿರ್ವಾಹಕ ಕೆ.ವಿರೇಶ, ನಿರ್ದೇಶಕರಾದ ಕೆ.ಭಾಸ್ಕರ್ ರೆಡ್ಡಿ, ಗೌಡ್ರು ಅಂಜಿನಪ್ಪ, ಎನ್.ಆಂಜನೇಯಲು, ವಿ.ಬಿ.ನಾಗರಾಜ, ಅರಳೆ ಮುತ್ತಯ್ಯ, ಹನುಮಂತಪ್ಪ ಕುರುಬರು, ಕೆ.ರಾಧಾ, ಟಿ.ರಾಮು, ಕೆ.ದೊಡ್ಡಬಸಪ್ಪ, ಅಳ್ಳಿ ನಾಗರಾಜ, ಪಿ.ಚೊಕ್ಕರಾವ್, ನಾಮ ನಿರ್ದೇಶಿತ ಸದಸ್ಯ ಬಳ್ಳಾಪುರ ಲಿಂಗಪ್ಪ ಇದ್ದರು.
ಈ ವೇಳೆ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ಶಾಸಕ ಜೆ.ಎನ್.ಗಣೇಶ ಹಾಗೂ ಜನಪ್ರತಿನಿಧಿಗಳು, ಮುಖಂಡರು ಸನ್ಮಾನಿಸಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಕಂಪ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಶ್ರೀನಿವಾಸರಾವ್, ಮುಖಂಡರಾದ ಪಿ.ಮೂಕಯ್ಯಸ್ವಾಮಿ, ಕಡೆಮನೆ ಪಂಪಾಪತಿ, ಅಳ್ಳಳ್ಳಿ ವಿರೇಶ, ವೆಂಕಟರಾಮರಾಜು, ಕೆ.ಷಣ್ಮುಕಪ್ಪ, ಹೊಸಕೋಟೆ ಜಗದೀಶ, ದೊಡ್ಡಬಸಪ್ಪ, ಶರಣಪ್ಪ, ಮಾರೇಶ, ಜಿ.ಮಲ್ಲಿಗೌಡ ಸೇರಿದಂತೆ ಜನಪ್ರತಿನಿಧಿಗಳು, ಮುಖಂಡರು ಹಾಗೂ ಸಿಬ್ಬಂದಿ ಇದ್ದರು.







