ಬಳ್ಳಾರಿ | ಮೃತ ಮಹಿಳೆಯ ವಾರಸುದಾರರ ಪತ್ತೆಗೆ ಮನವಿ

ಸಾಂದರ್ಭಿಕ ಚಿತ್ರ
ಬಳ್ಳಾರಿ : ನಗರದ ಸ್ಟೇಷನ್ ರಸ್ತೆಯ ಸರಕಾರಿ ಬಾಲಕಿಯರ ಶಾಲೆ ಮುಖ್ಯ ಗೇಟ್ ಎದುರುಗಡೆ ಅಪರಿಚಿತ ಮಹಿಳೆಯ ಮೃತದೇಹ ಕಂಡುಬಂದಿದ್ದು, ಈವರೆಗೆ ಮೃತಳ ವಾರಸುದಾರರು ಯಾರು ಎಂಬುವುದಾಗಿ ಪತ್ತೆಯಾಗಿಲ್ಲ. ಯಾರಾದರೂ ವಾರಸುದಾರರು ಇದ್ದರೆ ಸಂಪರ್ಕಿಸಿ ಎಂದು ಬ್ರೂಸ್ಪೇಟೆ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಮನವಿ ಮಾಡಿದ್ದಾರೆ.
ಈ ಕುರಿತು ಬ್ರೂಸ್ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಹರೆ ಗುರುತು: ಎತ್ತರ 5.4 ಅಡಿ, ಕೋಲು ಮುಖ, ಸಾಧಾರಣ ಮೈಕಟ್ಟು ಹೊಂದಿದ್ದು, ಗೋದಿ ಮೈಬಣ್ಣ, ಗುಂಗೂರು ಕಪ್ಪು ಕೂದಲು ಇರುತ್ತದೆ. ಪಿಂಕ್ ಬಣ್ಣದ ಬ್ಲೌಝ್ ಮತ್ತು ಸಿಮೆಂಟ್ ಕಲರ್ ಬಣ್ಣಗಳ ಸೀರೆ ಧರಿಸಿರುತ್ತಾರೆ. ಬಲ ಕಪಾಳಕ್ಕೆ ಒಂದು ಚುಕ್ಕೆ ತರ ಹಚ್ಚೆ ಗುರುತು ಇರುತ್ತದೆ.
ಈ ಮೇಲ್ಕಂಡ ಚಹರೆ ಗುರುತುಗಳುಳ್ಳ ಮೃತ ಮಹಿಳೆಯ ವಾರಸುದಾರರ ಬಗ್ಗೆ ಮಾಹಿತಿ ಸಿಕ್ಕಲ್ಲಿ ಬಳ್ಳಾರಿ ಪೊಲೀಸ್ ಕಂಟ್ರೋಲ್ ರೂಂ ದೂ.08392-258100, 258102 ಅಥವಾ ಬ್ರೂಸ್ಪೇಟೆ ಪೊಲೀಸ್ ಠಾಣೆಯ ದೂ.08392-272022, ಪಿ.ಐ ಮೊ.9480803045, ಪಿಎಸ್ಐ ಮೊ.9480803081 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.