ಬಳ್ಳಾರಿ| ವೃದ್ಧೆ ನಾಪತ್ತೆ: ಪತ್ತೆಗಾಗಿ ಮನವಿ

ಬಳ್ಳಾರಿ,ಜ.14: ನಗರದ ಮಹಿಳಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವೃದ್ಧೆಯೋರ್ವರು ನಾಪತ್ತೆಯಾಗಿದ್ದು, ಈ ಕುರಿತು ಪ್ರಕರಣ ದಾಖಲಾಗಿದೆ.
ಗಿರಿಜಮ್ಮ(78) ನಾಪತ್ತೆಯಾದ ವೃದ್ಧೆ. ಗಿರಿಜಮ್ಮ ಕಳೆದ ಡಿ.29 ರಂದು ಮನೆಯಿಂದ ಅಂಗಡಿಗೆ ಹೋಗಿದ್ದು, ಮನೆಗೆ ಮರಳಿ ಬಾರದೆ ನಾಪತ್ತೆಯಾಗಿದ್ದಾರೆ.
ವೃದ್ಧೆ 4.5 ಅಡಿ ಎತ್ತರ, ದಪ್ಪನೆಯ ಮೈಕಟ್ಟು, ಗೋಧಿ ಮೈಬಣ್ಣ, ದುಂಡನೆಯ ಮುಖ ಹೊಂದಿದ್ದಾರೆ. ನಾಪತ್ತೆ ವೇಳೆ ಹಸಿರು ಬಣ್ಣದ ಸೀರೆ ಹಾಗೂ ಕಪ್ಪು ಬಣ್ಣದ ಕುಪ್ಪಸ ಧರಿಸಿರುತ್ತಾರೆ. ಕನ್ನಡ, ತೆಲುಗು ಭಾಷೆ ಬಲ್ಲವರಾಗಿದ್ದಾರೆ. ನಾಪತ್ತೆಯಾದ ಮಹಿಳೆಯ ಬಗ್ಗೆ ಮಾಹಿತಿ ದೊರೆತರೆ ಬಳ್ಳಾರಿ ಪೊಲೀಸ್ ಕಂಟ್ರೋಲ್ ರೂಂಗೆ ಸಂಪರ್ಕಿಸುವಂತೆ ಕೋರಲಾಗಿದೆ.
Next Story





