ಬಳ್ಳಾರಿ| ವಿಶೇಷ ಚೇತನ ಮಕ್ಕಳಿಗೆ ಉಚಿತ ಚಿಕಿತ್ಸಾ ಶಿಬಿರ

ಬಳ್ಳಾರಿ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣ ಅಧಿಕಾರಿಗಳು ಮತ್ತು ಕ್ಷೇತ್ರ ಸಮನ್ವಯ ಅಧಿಕಾರಿಗಳ ಕಾರ್ಯಾಲಯ ಸಂಡೂರು ಹಾಗೂ ಅಲಿಂಕೋ ಸಂಸ್ಥೆಯ ಸಹಯೋಗದೊಂದಿಗೆ ವಿಶೇಷ ಚೇತನ ಮಕ್ಕಳಿಗೆ ಉಚಿತ ವೈದ್ಯಕೀಯ ಚಿಕಿತ್ಸಾ ಶಿಬಿರವು ಸಂಡೂರು ಛತ್ರಪತಿ ಶಿವಾಜಿ ಪ್ರೌಢಶಾಲೆಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣ ಅಧಿಕಾರಿಗಳಾದ ಡಾ.ಐ ಆರ್ ಅಕ್ಕಿ, ಸಮನ್ವಯ ಅಧಿಕಾರಿಯಾದ ಶರಣಬಸಪ್ಪ ಕರಿ ಶೆಟ್ಟಿ, ಪಿಎಂ ಪೋಷಣ್ಣ, ಯೋಜನಾ ನಿರ್ದೇಶಕರಾದ ಶ್ರೀಧರ್ ಮೂರ್ತಿ, ಎನ್‌ಜಿಒ ಅಧ್ಯಕ್ಷರಾದ ಸಿದ್ದಣ್ಣ ಯಳವಾರ್ ಹಾಗೂ ಬಳ್ಳಾರಿಯಿಂದ ಬಂದಂತಹ ವೈದ್ಯಾಧಿಕಾರಿಗಳ ತಂಡ ಭಾಗವಹಿಸಿದೆ.
ಸುಮಾರು 165 ಅಂಗವಿಕಲ ವಿದ್ಯಾರ್ಥಿಗಳು ಹಾಗೂ ಪೋಷಕರು ಶಿಬಿರದಲ್ಲಿ ಭಾಗವಹಿಸಿದ್ದಾರೆ. ತಪಾಸಣಾ ಕಾರ್ಯಕ್ರಮದ ಬಳಿಕ ಅಂಗವಿಕಲರಿಗೆ ಬೇಕಾದಂತಹ ಸಲಕರಣೆಗಳನ್ನು ಅಲಿಂಕೋ ಸಂಸ್ಥೆಯವರು ನೀಡುತ್ತಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಡಾಕ್ಟರ್ ಐ ಆರ್ ಅಕ್ಕಿ ಹೇಳಿದರು.
Next Story





