ಕಂಪ್ಲಿ| ಜ.1ರಂದು ಹಝರತ್ ಬಡೇಸಾಹೇಬ್ ಉರೂಸ್

ಕಂಪ್ಲಿ: ಪಟ್ಟಣದ ಗಂಗಾವತಿ ರಸ್ತೆಯಲ್ಲಿರುವ ಹಝರತ್ ಬಡೇ ಸಾಹೇಬ್ ದರ್ಗಾದಲ್ಲಿ ಮೂರು ದಿನ ನಡೆಯುವ 238ನೇ ಗಂಧ ಮತ್ತು ಉರೂಸ್ ಹಿನ್ನಲೆ ಸೈಯದ್ ಷಾ ಅಬುಲ್ ಹಸನ್ ಖಾದ್ರಿ, ಸೈಯದ್ ಷಾ ಅಬ್ದುಲ್ ಖಾದರ್ ಖಾದ್ರಿ, ಸೈಯದ್ ಷಾ ಮೆಹಮೂದ್ ಖಾದ್ರಿ, ಸೈಯದ್ ಷಾ ಹುಸೇನ್ ಪೀರ ಖಾದ್ರಿ, ಸೈಯದ್ ಷಾ ಗೇಸುದರಾಜ್ ಖಾದ್ರಿ, ಸೈಯದ್ ಅಬ್ದುಲ್ ಖಾದರ್ ಖಾದ್ರಿ, ಸೈಯದ್ ಷಾ ಅಬುತುರಾಬ್ ಖಾದ್ರಿ, ಸೈಯದ್ ಶಮ್ ಸುದ್ದೀನ್ ಖಾದ್ರಿ ಇವರ ದಿವ್ಯ ಸಾನಿಧ್ಯದಲ್ಲಿ ಕ್ಯಾಲೆಂಡರ್ ಮತ್ತು ಉರೂಸ್ ಬಿತ್ತಿ ಪತ್ರಗಳನ್ನು ಬಿಡುಗಡೆ ಮಾಡಲಾಯಿತು.
ಈ ವೇಳೆ ಸೈಯದ್ ಷಾ ಅಬುಲ್ ಹಸನ್ ಖಾದ್ರಿ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವು ಮೂರು ದಿನಗಳ ಕಾಲ ಹಜರತ್ ಬಡೇಸಾಬ್ ದರ್ಗಾದಲ್ಲಿ ಗಂಧ, ಉರುಸ್, ಝಿಯಾರತ್ ಮತ್ತು ಪಲ್ಲಕ್ಕಿ ಉತ್ಸವ ನಡೆಯಲಿದೆ. ಇದೇ ಡಿಸೆಂಬರ್ 31ರಂದು ಗಂಧ, 2026ರ ಜನವರಿ 1ರಂದು ಉರೂಸ್ ಹಾಗೂ 2ರಂದು ಜಿಯಾರತ್ ಮತ್ತು ಪಲ್ಲಕ್ಕಿ ಉತ್ಸವ ವಿಜೃಂಭಣೆಯಿಂದ ನೆರವೇರಲಿದೆ. ಆದ್ದರಿಂದ ಸರ್ವ ಧರ್ಮಿಯರು ಆಗಮಿಸಿ, ಉರುಸ್ ನಲ್ಲಿ ಭಾಗವಹಿಸಿ, ಯಶಸ್ವಿಗೊಳಿಸಬೇಕು. ಭಕ್ತರಿಗಾಗಿ ಅನ್ನಸಂತಾರ್ಪಣೆ ವ್ಯವಸ್ಥೆ ಮಾಡಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಬೇಕು ಎಂದು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಮುಖಂಡರಾದ ಹಾಜಿ ಕರೀಂಸಾಬ್, ಕೆ.ಮೆಹಬೂಬ್, ಯು.ಜಿಲಾನ್, ಯು.ಜಹಿರುದ್ಧೀನ್, ಬಡಿಗೇರ ಅಜೀಜ್ ಸಾಬ್, ಮುದುಗಲ್ ರೋಷನ್, ಗೆಜ್ಜಳ್ಳಿ ಭಾಷಾ, ಬಿ.ಜಿಲಾನಸಾಬ್, ಹೊನ್ನೂರವಲಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.







