ಬಳ್ಳಾರಿ | ಅನ್ನ ಭಾಗ್ಯದ ಅಕ್ಕಿ ಅಕ್ರಮವಾಗಿ ಸಾಗಾಟ : ಇಬ್ಬರ ಬಂಧನ

ಬಳ್ಳಾರಿ : ಕಂಪ್ಲಿ ಪಟ್ಟಣದಿಂದ ಗಂಗಾವತಿ ಕಡೆಗೆ ಅಕ್ರಮವಾಗಿ ಅಕ್ಕಿ ಸಾಗಿಸುತ್ತಿರುವುದನ್ನು ಪತ್ತೆ ಹಚ್ಚಿದ ಪೊಲೀಸರು ಇಬ್ಬರು ಮಹಿಳೆಯರನ್ನು ವಶಕ್ಕೆ ಪಡೆದುಕೊಂಡು ಅನ್ನಭಾಗ್ಯ ಯೋಜನೆಯ ಹಲವಾರು ಮೂಟೆ ಅಕ್ಕಿ, ಸಾಗಾಣಿಕೆಗೆ ಬಳಸಿದ ಟ್ಯಾಕ್ಟರ್ ಅನ್ನು ವಶಪಡಿಸಿಕೊಂಡಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಕಂಪ್ಲಿ ಪಟ್ಟಣದ ಗಂಗಾವತಿ ರಸ್ತೆಯ ಕಲ್ಮಠದ ಹತ್ತಿರ ಆಹಾರ ನಿರೀಕ್ಷಕ ವಿರೂಪಾಕ್ಷಗೌಡ ಮತ್ತು ಪೊಲೀಸರು ಈ ದಾಳಿಯನ್ನು ನಡೆಸಿ ಅಕ್ಕಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಕುರಿತು ಕಂಪ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story




