ಬಳ್ಳಾರಿ | ಶಾಂತಿ ಬಾಯಿಗೆ ʼಕನ್ನಡ ರಾಜ್ಯೋತ್ಸವ ಪ್ರಶಸ್ತಿʼ

ಬಳ್ಳಾರಿ : ರಾಜ್ಯ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಡಮಾಡುವ 2025-26ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರಕಟವಾಗಿದ್ದು, ಶಾಂತಿ ಬಾಯಿ ಕೆ ಅವರು "ಸಂಕೀರ್ಣ" ವಿಭಾಗದಲ್ಲಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಶುಶೀಲ ನಗರ ನಿವಾಸಿ ಶಾಂತಿ ಬಾಯಿ ಕೆ. ಅವರು 1990ರಲ್ಲಿ ಸಂಡೂರು ಕರಕುಶಲ ಕೇಂದ್ರಕ್ಕೆ ಸೇರುವ ಮೂಲಕ 1993 ರಿಂದ ಕೇಂದ್ರ, ರಾಜ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ರಾಷ್ಟ್ರಪತಿಗಳಿಂದ ರಾಷ್ಟ್ರೀಯ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿ ಇವರಿಗೆ ಲಭಿಸಿದೆ.
Next Story





