ಬಳ್ಳಾರಿ | ಸೌಲಭ್ಯಗಳ ಸದ್ಭಳಕೆಯೊಂದಿಗೆ ಪ್ರಗತಿ ಹೊಂದಿ : ರೇಖಾ

ಬಳ್ಳಾರಿ / ಕಂಪ್ಲಿ : ಪಟ್ಟಣದ ಕಲ್ಮಠ ಐಟಿಐ ಕಾಲೇಜಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ವ್ಯಕ್ತಿತ್ವ ನಿರ್ಮಾಣ ಮತ್ತು ಜೀವನ ರೂಪಿಸುವಲ್ಲಿ ಶಿಕ್ಷಣದ ಮಹತ್ವ ಕುರಿತು ಅರಿವು ಕಾರ್ಯಕ್ರಮ ಬುಧವಾರ ಜರಗಿತು.
ತಾಲೂಕು ಸಮನ್ವಯ ಅಧಿಕಾರಿ ರೇಖಾ ಮಾತಾಡಿ, ಸಂಸ್ಥೆಯು ಶೈಕ್ಷಣಿಕ ಹಿತ ಕಾಪಾಡುವ ದೃಷ್ಟಿಯಿಂದ ಸಂಘದ ಸದಸ್ಯರ ಮಕ್ಕಳಿಗೆ ವೃತ್ತಿಪರ ಶಿಕ್ಷಣ ಪಡೆಯುತ್ತಿದ್ದರೆ ಶಿಷ್ಯವೇತನ ಸೇರಿದಂತೆ ಹಲವಾರು ಸೌಲಭ್ಯಗಳನ್ನು ನೀಡುತ್ತಿದ್ದು, ಬಳಕೆ ಮಾಡಿಕೊಂಡು ಪ್ರಗತಿ ಹೊಂದಬೇಕು ಎಂದರು.
ನಂತರ ಸಂಪನ್ಮೂಲ ವ್ಯಕ್ತಿ ಶಿಕ್ಷಕ ಎಸ್.ರಾಮಪ್ಪ ಮಾತನಾಡಿದರು.
ಈ ಸಂದರ್ಭದಲ್ಲಿ ಉಪನ್ಯಾಸಕ ಅಂಬರೀಶ್, ಶಿಕ್ಷಕರಾದ ಕುಮಾರ್, ಸದಾನಂದ, ಸೇವಾ ಪ್ರತಿನಿಧಿ ವಾಣಿಶ್ರೀ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.
Next Story





