ಬಳ್ಳಾರಿ | ಮಹಿಳೆ ಕಾಣೆ : ಪತ್ತೆಗೆ ಮನವಿ

ಬಳ್ಳಾರಿ : ಸಿರುಗುಪ್ಪ ತಾಲ್ಲೂಕಿನ ಕೆಸರಕುಣಿ ಕ್ಯಾಂಪ್‌ನ ದುರುಗಮ್ಮ ಗುಡಿ ಹತ್ತಿರದ ನಿವಾಸಿ ಜೆ.ಸುರೇಖ/ಕಾವ್ಯ ಎನ್ನುವ 30 ವರ್ಷದ ಮಹಿಳೆಯು ಜು.15 ರಂದು ಕಾಣೆಯಾಗಿರುವ ಕುರಿತು ಸಿರುಗುಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತ್ತೆಗೆ ಸಹಕರಿಸಬೇಕು ಎಂದು ಪೊಲೀಸ್ ಪಿಎಸ್‌ಐ ಅವರು ಮನವಿ ಮಾಡಿದ್ದಾರೆ.
ಚಹರೆ: ಎತ್ತರ 5.3 ಅಡಿ, ಕೋಲು ಮುಖ, ಗೋಧಿ ಮೈಬಣ್ಣ, ತೆಳುವಾದ ಮೈಕಟ್ಟು ಹೊಂದಿದ್ದು, ಮಹಿಳೆ ಕಾಣೆಯಾದ ಸಂದರ್ಭದಲ್ಲಿ ಹಸಿರು ಬಣ್ಣದ ಚೂಡಿದಾರ ಡ್ರೆಸ್ ಧರಿಸಿರುತ್ತಾರೆ. ಇವರು ಕನ್ನಡ ಮತ್ತು ತೆಲುಗು ಭಾಷೆ ಮಾತನಾಡುತ್ತಾರೆ.
ಮೇಲ್ಕಂಡ ಚಹರೆ ಗುರುತುಗಳುಳ್ಳ ಮಹಿಳೆಯ ಬಗ್ಗೆ ಮಾಹಿತಿ ದೊರೆತಲ್ಲಿ ಸಿರುಗುಪ್ಪ ಪೊಲೀಸ್ ಠಾಣೆಯ ಪಿಎಸ್‌ಐ ದೂ.08396-220333, ಸಿರುಗುಪ್ಪ ವೃತ್ತದ ಸಿಪಿಐ ದೂ.08396-220003, ಸಿರುಗುಪ್ಪ ಉಪ ವಿಭಾಗದ ಡಿಎಸ್‌ಪಿ ದೂ.08396-276000 ಅಥವಾ ಬಳ್ಳಾರಿ ಎಸ್‌ಪಿ ಅವರ ಕಚೇರಿ ದೂ.08392-258400 ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





