ಕಂಪ್ಲಿ | ಅಧಿಕಾರ ಶಾಶ್ವತವಲ್ಲ, ಜನರ ಪ್ರೀತಿಯೇ ಮುಖ್ಯ: ಶಾಸಕ ಗಣೇಶ್

ಕಂಪ್ಲಿ: ಕಂಪ್ಲಿಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ (BEO) ಕಚೇರಿಯ ಅವಶ್ಯಕತೆ ಇರುವುದನ್ನು ಮನಗಂಡು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರೊಂದಿಗೆ ಸುದೀರ್ಘ ಚರ್ಚೆ ನಡೆಸಲಾಗಿದೆ. ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಶೀಘ್ರವೇ ಕಚೇರಿ ಮಂಜೂರು ಮಾಡುವ ಭರವಸೆ ನೀಡಿದ್ದಾರೆ ಎಂದು ಶಾಸಕ ಜೆ.ಎನ್. ಗಣೇಶ್ ಹೇಳಿದರು.
ಪಟ್ಟಣದ ವೀರಶೈವ ಭವನದಲ್ಲಿ ಶುಕ್ರವಾರ ಶಿಕ್ಷಣ ಇಲಾಖೆ, ಕುರುಗೋಡು ಬಿಇಒ ಕಚೇರಿ ಹಾಗೂ ವಿವಿಧ ಶಿಕ್ಷಕರ ಸಂಘಟನೆಗಳ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ಸಾವಿತ್ರಿಬಾಯಿ ಫುಲೆ ಅವರ ಜಯಂತ್ಯೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮೊದಲ ಬಾರಿಗೆ ಶಾಸಕನಾದಾಗ ಕ್ಷೇತ್ರದಲ್ಲಿ ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಹಲವು ಸಮಸ್ಯೆಗಳಿದ್ದವು. ನಂತರದ ದಿನಗಳಲ್ಲಿ ಹೆಚ್ಚಿನ ಅನುದಾನ ಬಳಸಿಕೊಂಡು ಶೈಕ್ಷಣಿಕ ಬದಲಾವಣೆ ಹಾಗೂ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ನಡೆಸಿದ್ದೇನೆ. ಶಿಕ್ಷಕರು ಹಾಗೂ ಸರ್ಕಾರಿ ನೌಕರರ ಭವನದ ಬೇಡಿಕೆಯನ್ನು ಆದಷ್ಟು ಬೇಗ ಈಡೇರಿಸಲಾಗುವುದು ಎಂದು ಅವರು ಆಶ್ವಾಸನೆ ನೀಡಿದರು.
ಅಧಿಕಾರ ಎನ್ನುವುದು ಶಾಶ್ವತವಲ್ಲ, ಜನರೊಂದಿಗೆ ನಾವು ಗಳಿಸುವ ಪ್ರೀತಿ ಮತ್ತು ವಿಶ್ವಾಸ ಮಾತ್ರ ಕೊನೆಯವರೆಗೂ ಉಳಿಯುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ಇದೇ ಸಂದರ್ಭದಲ್ಲಿ ವಿವಿಧ ಸಾಧಕ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ನಂತರ ನಿವೃತ್ತ ಶಿಕ್ಷಕರಾದ ವಿರೇಶ, ಎಲೆಗಾರ ಪಾರ್ವತಿ, ಶೀಲಾವತಿ, ಸರ್ವಮಂಗಳ, ರಾಘವೇಂದ್ರ, ಹುಲಿಕುಂಟಾಚಾರ್ ಹಾಗು ಇ. ಶಾಂತ ಗಡ್ಡಾದ್, ನಾಗವೇಣಿ, ಎನ್.ಲೋಕೇಶ, ಮರಿಸ್ವಾಮಿ, ಮುದುಕಪ್ಪ, ಬಸವನಗೌಡ, ವೆಂಕಟರಮಣ, ಗಾದಿಲಿಂಗಪ್ಪ, ಹೊಸಗೇರಪ್ಪ, ವೈ. ಎಂ. ಈರಮ್ಮ, ಸಂಗನಗೌಡ ಗೌಡರ್, ವಿರೇಶ, ಈರಮ್ಮ, ನರಸಿಂಹಲು, ಎಸ್.ಚಂದ್ರಪ್ಪ, ಶೃತಿಕುಮಾರಿ, ರಂಗಪ್ಪ, ಮಡಿವಾಳಪ್ಪ, ಎನ್. ಶಿವಕುಮಾರ, ಕೆ. ಮೌನೇಶ, ಎಸ್. ಭವ್ಯಶ್ರೀ, ಪ್ರಶಸ್ತಿ ಪುರಸ್ಕೃತರಾದ ಲಕ್ಷ್ಮಿಕಾಂತ ಬಣಕಾರ, ಸದ್ಯೋಜಾತಪ್ಪ, ಅನ್ನದಾನೇಶ್, ರೇಣುಕಾದೇವಿ, ಸುನೀತಾ ಕುಮಾರಿ, ಶ್ಯಾಮಲಾ ಪಿ. ಜೆ. ವಿರೇಶ ಕೆ., ಮೇಲಾರೆಡ್ಡಿ, ಜಬೀನಾ, ಬಿ. ಜಯಮ್ಮ, ಲಕ್ಕಪ್ಪ, ರಂಗಪ್ಪ ಕಟ್ಟಿಮನಿ, ಮಡಿವಾಳಪ್ಪ, ಶಾಬನ, ರೇಣುಕಾ ಆರ್. ಎಚ್, ಪರಶುರಾಮ, ಬಿ. ಸಾವಿತ್ರಿ, ಪಿ. ಎನ್. ರಾಜಾಭಕ್ಷಿ, ವಿರುಪಾಕ್ಷಪ್ಪ, ಶ್ರೀ ವಿಜಯ ಇವರಿಗೆ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಬಿಇಒ ಸಿದ್ದಲಿಂಗಮೂರ್ತಿ, ಇಒ ಆರ್.ಕೆ.ಶ್ರೀಕುಮಾರ, ಎಡಿ ಮಲ್ಲನಗೌಡ ಕೆ.ಎಸ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹನುಮಂತಪ್ಪ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹೆಚ್.ದೊಡ್ಡಬಸಪ್ಪ, ಪ್ರಮುಖರಾದ ಪಿ.ನಾಗೇಶ್ವರರಾವ್, ಸಿ.ಆರ್.ಹನುಮಂತ, ಲಿಂಗಪ್ಪ, ಟಿ.ಎಂ.ಬಸವರಾಜ, ರೇವಣ್ಣ, ಮಂಜುನಾಥ, ಯುಗಾದಿ ಶಿವರಾಜ, ಗಾದಿಲಿಂಗಪ್ಪ, ಜಡೆಪ್ಪ, ಸುಗ್ಗೇನಹಳ್ಳಿ ರಮೇಶ, ಬಸವರಾಜ ಪಾಟೀಲ್, ಸುಜಾತ ಸೇರಿದಂತೆ ಸಿಆರ್ಪಿಗಳು, ಖಾಸಗಿ ಆಡಳಿತ ಮಂಡಳಿಯ ಮುಖ್ಯಸ್ಥರು ಶಿಕ್ಷಕರು ಸೇರಿದಂತೆ ಇತರರು ಉಪಸ್ಥಿತರಿದ್ದರು.







