ಕಂಪ್ಲಿ | ಅಂಬೇಡ್ಕರ್ ಜಯಂತ್ಯೋತ್ಸವದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ

ಕಂಪ್ಲಿ : ಸ್ಥಳೀಯ ಚಲವಾದಿಕೇರಿಯಲ್ಲಿ ಅಂಬೇಡ್ಕರ್ ಅನುಯಾಯಿಗಳ ಬಳಗ ಹಾಗೂ ಜೆಬಿ ಕಿಂಗ್ಸ್ ಆಶ್ರಯದಲ್ಲಿ ಆಯೋಜಿಸಿದ್ದ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಜಯಂತ್ಯೋತ್ಸವದಲ್ಲಿ ಹತ್ತನೇ ತರಗತಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಅಧಿಕ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಅಭಿನಂದನಾ ಪತ್ರಗಳನ್ನು ವಿತರಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಪಿಐ ವಾಸುಕುಮಾರ್, ಕಂಪ್ಲಿ ಜೆಸ್ಕಾಂ ಎಇಇ ಕೆ. ಶ್ರೀನಿವಾಸ ಪ್ರಸಾದ್, ದಿಶಾ ಸಮಿತಿ ಸದಸ್ಯ ಎ.ಸಿ. ದಾನಪ್ಪ, ಪ್ರಾಚಾರ್ಯ ಸಿದ್ದಣ್ಣ ಪರಮೇಶ್ವರ, ಶಿಕ್ಷಕ ರಮೇಶ್ ಸುಗ್ಗೇನಹಳ್ಳಿ ಸೇರಿದಂತೆ ಹಲವರು ಡಾ. ಬಿ.ಆರ್. ಅಂಬೇಡ್ಕರ್ ಅವರ ತತ್ವ, ಆದರ್ಶ ಹಾಗೂ ಜೀವನ ಚರಿತ್ರೆ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ಮುಖಂಡರಾದ ಎಂ.ಸಿ. ಮಾಯಪ್ಪ, ಸಿದ್ಧಿ ಅಂಜಿನಪ್ಪ, ಚನ್ನಪ್ಪ, ಟಿ. ಶಿವಪ್ಪ ಹಾಗೂ ಬಳಗದ ಪದಾಧಿಕಾರಿಗಳಾದ ಯೋಗರಾಜ್, ಸುನೀಲ್, ಸುರೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಡಾ. ಬಿ.ಆರ್. ಅಂಬೇಡ್ಕರ್ ಭಾವಚಿತ್ರದ ಮೆರವಣಿಗೆಗೆ ಅಖಿಲ ಭಾರತ ವೀರಶೈವ ಲಿಂಗಾಯತ ಯುವ ವೇದಿಕೆಯ ಜಿಲ್ಲಾ ಅಧ್ಯಕ್ಷ ಹೊಸಕೋಟೆ ಜಗದೀಶ್ ಚಾಲನೆ ನೀಡಿದರು.




