ಬಳ್ಳಾರಿ| ಕಾಂಗ್ರೆಸ್ ಕಾರ್ಯಕರ್ತನ ಹತ್ಯೆ ಪ್ರಕರಣ: ಸತೀಶ್ ರೆಡ್ದಿಯ ಮೂವರು ಖಾಸಗಿ ಗನ್ ಮ್ಯಾನ್‌ಗಳ ಬಂಧನ

ಗುಂಪು ಘರ್ಷಣೆಯಲ್ಲಿ ಬಂಧಿತರ ಸಂಖ್ಯೆ 26ಕ್ಕೆ ಏರಿಕೆ
ಬಳ್ಳಾರಿ: ಬಳ್ಳಾರಿಯಲ್ಲಿ ಬ್ಯಾನರ್ ಕಟ್ಟುವ ವಿಚಾರವಾಗಿ ನಡೆದ ಗಲಾಟೆ ವೇಳೆ ಫೈರಿಂಗ್ ನಲ್ಲಿ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ಬಳ್ಳಾರಿಯ ಬ್ರೂಸ್ ಪೇಟೆ ಠಾಣೆ ಪೊಲೀಸರು ಶಾಸಕ ನಾರಾ ಭರತ್ ರೆಡ್ಡಿ ಆಪ್ತನಾದ ಸತೀಶ್ ರೆಡ್ದಿಯ ಮೂವರು ಖಾಸಗಿ ಗನ್ ಮ್ಯಾನ್‌ಗಳನ್ನು ಬಂಧಿಸಿದ್ದಾರೆ.
ಪಂಜಾಬ್ ಮೂಲದ ಬಲ್ಜಿತ್ ಸಿಂಗ್, ಮಹೇಂದ್ರ ಸಿಂಗ್ ಹಾಗೂ ಗುರುಚರಣ ಸಿಂಗ್ ಬಂಧಿತರು. ಇವರು ಖಾಸಗಿ ಗನ್ ಮ್ಯಾನ್‌ಗಳಾಗಿದ್ದರು.
ಜ.1ರಂದು ಬಳ್ಳಾರಿಯಲ್ಲಿ ನಡೆದ ಗಲಾಟೆ ವೇಳೆ ಈ ಮೂವರು ಗನ್ ಮ್ಯಾನ್‌ಗಳು ಗಾಳಿಯಲ್ಲಿ ಫೈರಿಂಗ್ ಮಾಡಿದ್ದರು ಎನ್ನಲಾಗಿದೆ.
ಇದೀಗ ಮೂವರು ಗನ್‌ಮ್ಯಾನ್‌ಗಳು ಸೇರಿ ಒಟ್ಟು 26 ಜನರನ್ನು ಬಳ್ಳಾರಿಯ ಬ್ರೂಸ್ ಪೇಟೆ ಠಾಣೆ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
Next Story





