ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಹಿಂದುಳಿದ ವರ್ಗಗಳಿಗೆ ಅನುಕೂಲವಾಗಿದೆ : ಕೆ. ಶ್ರೀನಿವಾಸರಾವ್

ಬಳ್ಳಾರಿ / ಕಂಪ್ಲಿ: ಕಳೆದ ಮೂರು ವರ್ಷಗಳಿಂದ ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿದಿರುವ ಕಾಂಗ್ರೇಸ್ ಸರ್ಕಾರ ನೀಡಿರುವ ಪಂಚ ಗ್ಯಾರಂಟಿ ಯೋಜನೆಗಳು ರಾಜ್ಯ ಜನತೆಗೆ ಅದರಲ್ಲೂ ಹಿಂದುಗಳಿದ ವರ್ಗಗಳಿಗೆ ಅನುಕೂಲವಾಗಿವೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠನ ಸಮಿತಿ ತಾಲ್ಲೂಕು ಅಧ್ಯಕ್ಷ ಕೆ.ಶ್ರೀನಿವಾಸರಾವ್ ತಿಳಿಸಿದರು.
ಅವರು ತಾಲ್ಲೂಕಿನ ಹಂಪಾದೇವನಹಳ್ಳಿ ಗ್ರಾ.ಪಂ.ವ್ಯಾಪ್ತಿಯ ಜವುಕು ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಪಂಚ ಗ್ಯಾರಂಟಿ ಯೋಜನೆಗಳ ಜಾಗೃತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಹಾಗೂ ವಿಬಿ ರಾಮಜಿ ಪ್ರಚಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ನೋಂದಾಯಿಸಿಕೊಂಡ ಫಲಾನುಭವಿಗಳಿಗೆ ಗ್ಯಾರಂಟಿಗಳನ್ನು ತಲುಪಿಸಲಾಗವುದು. ಯಾವುದೇ ಕಾರಣಕ್ಕೂ ಪಂಚ ಗ್ಯಾರಂಟಿಗಳನ್ನು ನಿಲ್ಲಿಸದೇ ಅರ್ಹರಿಗೆ ಸೂಕ್ತವಾಗಿ ತಲುಪಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.
ತಾ.ಪಂ.ಇಒ ಆರ್.ಕೆ.ಶ್ರೀಕುಮಾರ್ ಮಾತನಾಡಿ ಸರ್ಕಾರದ ಗ್ಯಾರಂಟಿಗಳನ್ನು ಬಳಸಿಕೊಂಡು ಪ್ರಗತಿ ಸಾದಿಸಬೇಕು. ಸರ್ಕಾರದ ಗೃಹಲಕ್ಷ್ಮೀ, ಗೃಹಜ್ಯೋತಿ, ಶಕ್ತಿ ಯೋಜನೆ ಸೇರಿದಂತೆ ಇತರೆ ಯೋಜನೆಗಳು ಹಿಂದುಳಿದ ಜನತೆಗೆ ವರದಾನವಾಗಿವೆ. ಗ್ಯಾರಂಟಿಗಳನ್ನು ಕಡಿತಗೊಳಿಸದೇ ಎಲ್ಲರಿಗೂ ತಲುಪಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾದ ಶಿವಕುಮಾರ್, ವೀರಭದ್ರಗೌಡ, ಎಂ.ರಾಜಾಭಕ್ಷಿ ಮುಖಂಡರಾದ ರಾಜೇಗೌಡ, ಎ.ಹುಲುಗಪ್ಪ, ಎ.ಕಿಮಾರಸ್ವಾಮಿ, ಹನುಮಂತಪ್ಪ, ಸಿ.ಬಸವರಾಜ, ಎಸ್.ಬಸವರಾಜ, ಪಿಡಿಒ ಬೀರಲಿಂಗ, ಐಈಸಿ ಸಂಯೋಜಕ ಎಚ್.ಹನುಮೇಶ, ಡಿಇಒ ನಾಗರಾಜ, ಕರವಸೂಲಿಗಾರ ಜಡೆಯ್ಯಸ್ವಾಮಿ, ಬಿಎಫ್ ಟಿ ಪಂಪಾಪತಿ, ಎಂಬಿಕೆ ಪುಷ್ಪಾವತಿ ಸೇರಿದಂತೆ ಸಾರ್ವಜನಿಕರು ಭಾಗವಹಿಸಿದ್ದರು.






