ಫೋಟೊಗ್ರಾಫರ್ಸ್, ವಿಡಿಯೊಗ್ರಾಫರ್‌ಗಳಿಗೆ ಕಾರ್ಮಿಕ ಇಲಾಖೆ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಿ: ಜಗದೀಶಗೌಡ

ಬಳ್ಳಾರಿ/ಕಂಪ್ಲಿ : ಸರಕಾರ ಫೋಟೊಗ್ರಾಫರ್ಸ್, ವಿಡಿಯೊಗ್ರಾಫರ್‌ಗಳಿಗೆ ಕಾರ್ಮಿಕ ಇಲಾಖೆ ಎಲ್ಲ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ತಾಲೂಕು ಫೋಟೊಗ್ರಾಫರ್ಸ್ ಮತ್ತು ವಿಡಿಯೊಗ್ರಾಫರ್ಸ್ ಅಸೋಸಿಯೇಷನ್‌ನ ಪದಾಧಿಕಾರಿಗಳು ಹಾಗೂ ಅಧ್ಯಕ್ಷರಾದ ಜಗದೀಶಗೌಡ ಅವರು ಸರ್ಕಾರದಕ್ಕೆ ಪ್ರಮುಖವಾಗಿ ಒತ್ತಾಯಿಸಿದ್ದರು.
ಪಟ್ಟಣದ ಎಪಿಎಂಸಿ ಆವರಣದಲ್ಲಿ ನಡೆದ ವಿಶ್ವ ಛಾಯಾಗ್ರಾಹಕ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 'ಕಾರ್ಮಿಕ ಇಲಾಖೆಯ ವತಿಯಿಂದ ಸಿಗುವ ಆರೋಗ್ಯ ವಿಮೆ, ಅಪಘಾತ ವಿಮೆ, ಮತ್ತು ಪಿಂಚಣಿ ಯೋಜನೆಗಳು ಎಲ್ಲರಿಗೂ ತಲುಪಬೇಕು. ವೃತ್ತಿಪರ ಛಾಯಾಗ್ರಾಹಕರಿಗೆ ಸರ್ಕಾರದಿಂದ ಅಧಿಕೃತ ಸ್ಮಾರ್ಟ್ ಕಾರ್ಡ್ ಅಥವಾ ಲೇಬರ್ ಕಾರ್ಡ್ ವಿತರಿಸಲು ಅಭಿಯಾನ ಹಮ್ಮಿಕೊಳ್ಳಬೇಕು. ಸೀಸನ್ ಇಲ್ಲದ ಸಮಯದಲ್ಲಿ ಅಥವಾ ತುರ್ತು ಸಂದರ್ಭಗಳಲ್ಲಿ ಸಾಲ ಸೌಲಭ್ಯ ಹಾಗೂ ಆರ್ಥಿಕ ನೆರವು ಒದಗಿಸಬೇಕು. ವಸತಿ ಸೌಲಭ್ಯ ಸೇರಿದಂತೆ ಇತರೆ ಸವಲತ್ತುಗಳನ್ನು ನೀಡವ ನಿಟ್ಟಿನಲ್ಲಿ ಶಾಸಕರು, ಆಡಳಿತ ಪುರಸಭೆ ಆಸಕ್ತಿವಹಿಸಬೇಕು,” ಎಂದರು.
ಇದಕ್ಕೂ ಮೊದಲು ಉದ್ಭವ ಗಣಪತಿ ದೇಗುಲದಿಂದ ಎಪಿಎಂಸಿವರೆಗೆ ಮೆರವಣಿಗೆ ನಡೆಯಿತು. ಸಂಘದ ಸದಸ್ಯರಿಗೆ ಗುರುತಿನ ಚೀಟಿ ವಿತರಿಸಲಾಯಿತು. ಸಂಘದ ಪದಾಧಿಕಾರಿಗಳಾದ ಜಿ.ಎಚ್.ಶಶಿಧರ, ಎಸ್. ಶ್ರೀನಿವಾಸರೆಡ್ಡಿ, ಇಲಿಯಾಝ್, ಶಿವಕುಮಾರ್, ಎಮ್ಮಿಗನೂರು ಬಸವರಾಜ, ಎಚ್.ಎಸ್.ವೀರೇಶ್, ತಿಪ್ಪೇಸ್ವಾಮಿ, ವೀರನಗೌಡ, ಪ್ರಮೋದ್ ಕುಮಾರ್ ಸೇರಿ ತಾಲೂಕಿನ ಫೋಟೊಗ್ರಾಫರ್, ವಿಡಿಯೊಗ್ರಾಫರ್ ಸೇರಿದಂತೆ ಇತರರಿದ್ದರು.




