ಕಂಪ್ಲಿ | ಎಮ್ಮಿಗನೂರಿನಲ್ಲಿ ಬಸವ ಜಯಂತಿ

ಕಾಯಕ ತತ್ವವೇ ಸಮಾಜ ಸುಧಾರಣೆಯ ಮೂಲ : ಎಚ್.ಪೀರಾವಲಿ
ಬಳ್ಳಾರಿ / ಕಂಪ್ಲಿ: ತಾಲೂಕಿನ ಎಮ್ಮಿಗನೂರು ಗ್ರಾಮದ ಡಾಕ್ಟರ್ ಅಬ್ದುಲ್ ಕಲಾಂ ಎಸ್.ಪಿ. ಚಾರಿಟೇಬಲ್ ಫೌಂಡೇಶನ್ ವತಿಯಿಂದ 893ನೇ ವಿಶ್ವಗುರು ಜಗಜ್ಯೋತಿ ಬಸವಣ್ಣನವರ ಜಯಂತೋತ್ಸವವನ್ನು ಆಚರಿಸಲಾಯಿತು.
ಫೌಂಡೇಶನ್ ಕಾರ್ಯದರ್ಶಿ ಎಚ್. ಪೀರಾವಲಿ ಅವರು ಮಾತನಾಡಿ, ಬಸವಣ್ಣ ಕಾಯಕ ತತ್ವವನ್ನು ಬೋಧಿಸಿ ಸಮಾಜದಲ್ಲಿ ಬೇರೂರಿದ್ದ ಮೂಢನಂಬಿಕೆ, ಮಡಿ–ಮೈಲಿಗೆ, ಮೇಲು–ಕೀಳು, ಲಿಂಗ ಅಸಮಾನತೆ ಹಾಗೂ ಜಾತಿ ವ್ಯವಸ್ಥೆಯಂತಹ ಅನಿಷ್ಠ ಪದ್ಧತಿಗಳನ್ನು ಹೋಗಲಾಡಿಸಿದ ಮಹಾನ್ ಸಮಾಜ ಸುಧಾರಕರು ಎಂದು ಹೇಳಿದರು.
“ದಯವೇ ಧರ್ಮದ ಮೂಲವಯ್ಯ” ಎಂಬ ಸಂದೇಶದ ಮೂಲಕ ಮಾನವೀಯತೆಯನ್ನು ಜಗತ್ತಿಗೆ ಸಾರಿದ ಬಸವಣ್ಣನವರು ತಮ್ಮ ವಚನಗಳ ಮೂಲಕ ಸಮಾಜ ಪರಿವರ್ತನೆಗೆ ಶ್ರಮಿಸಿದವರು ಎಂದು ಅವರು ತಿಳಿಸಿದರು. ಕಾಯಕದ ನಿಷ್ಠೆಯನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಕರಾಟೆ ಮಾಸ್ಟರ್ ರಾಜಭಕ್ಷಿ ದೇವರ ಮನೆ ಸಾಧಕಲಿ ಎಸ್.ಪಿ. ಕೋಚಿಂಗ್ ಸೆಂಟರ್‌ನಲ್ಲಿ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳು ಭಾಗವಹಿಸಿದ್ದರು.
Next Story




