Kampli | ಕನಕದಾಸರ ಸಾಹಿತ್ಯ, ಕೀರ್ತನೆಗಳು ಸಮಾಜಕ್ಕೆ ಉತ್ತಮ ಸಂದೇಶ ನೀಡಿವೆ: ಜೂಗಲ ಮಂಜುನಾಯಕ
ಕನಕದಾಸ ಜಯಂತಿ ಕಾರ್ಯಕ್ರಮ

ಕಂಪ್ಲಿ: ಭಕ್ತ ಕನಕದಾಸರ ಸಾಹಿತ್ಯ ಮತ್ತು ಕೀರ್ತನೆಗಳು ಸಮಾಜಕ್ಕೆ ಉತ್ತಮ ಸಂದೇಶ ನೀಡುವುದರ ಜೊತೆಗೆ ಸಂಗೀತ ಕ್ಷೇತ್ರಕ್ಕೂ ಅಮೂಲ್ಯ ಕೊಡುಗೆ ನೀಡಿವೆ ಎಂದು ತಹಶೀಲ್ದಾರ್ ಜೂಗಲ ಮಂಜುನಾಯಕ ಹೇಳಿದರು.
ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಂಘದ ಅಧ್ಯಕ್ಷ ಗೌಡ್ರು ಡಿಂಡಿ ಮಹರ್ಷಿ ಮಾತನಾಡಿ, ಕನಕದಾಸರ ತತ್ವಗಳು ಹಾಗೂ ಆದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಭಾರಿ ಉಪ ತಹಶೀಲ್ದಾರ್ ಎಸ್.ಡಿ. ರಮೇಶ, ಸಂಘದ ಉಪಾಧ್ಯಕ್ಷ ಬಂಡಿ ಮಂಜುನಾಥ, ಪದಾಧಿಕಾರಿಗಳಾದ ನಾಗೇಂದ್ರಪ್ಪ, ಮಲ್ಲಿಕಾರ್ಜುನ, ದೊಡ್ಡಬಸಪ್ಪ, ಪಾಂಡುರಂಗಪ್ಪ, ಹರಿನಾಥಗೌಡ, ಪಕ್ಕೀರಪ್ಪ, ಅಳ್ಳಳ್ಳಿ ನಾಗರಾಜ, ಶೇಖರ್, ಯಮುನಪ್ಪ, ಭೀಮಲಿಂಗಪ್ಪ, ಶರಣಪ್ಪ, ಜಕ್ಕಪ್ಪ, ಗಣಪತಿ, ಜಿ. ಬಲಕುಂದೆಪ್ಪ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.
Next Story




