ಮೈಲಾಪುರ | ಮೃತದೇಹ ಪತ್ತೆಗಾಗಿ ಮನವಿ

ಬಳ್ಳಾರಿ, ಜ.8: ಜಿಲ್ಲೆಯ ಮೈಲಾಪುರ ಗ್ರಾಮದ ಕಾಲುವೆಗೆ ಬಿದ್ದು ಇಬ್ಬರು ಮೃತಪಟ್ಟಿದ್ದು, ಅದರಲ್ಲಿ ಒಬ್ಬರ ಮೃತದೇಹ ಪತ್ತೆಯಾಗಿಲ್ಲ ಎಂದು ಸಂಚಾರಿ ಠಾಣಾ ಪೊಲೀಸರು ತಿಳಿಸಿದ್ದಾರೆ.
ಜ.4ರಂದು ಕುಮಾರ್ ಮತ್ತು ಮಲ್ಲಿಕಾರ್ಜುನ ನಗರದ ಇಂಡಸ್ಟ್ರಿಯಲ್ ಏರಿಯಾದ ಮುಂಡರಗಿ ರಸ್ತೆಯಲ್ಲಿ ಹೋಗುತ್ತಿದ್ದಾಗ ಅವರು ಚಲಾಯಿಸುತ್ತಿದ್ದ ವಾಹನ ಕಾಲುವೆಗೆ ಉರುಳಿದೆ. ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದು, ಕುಮಾರ್ ಎಂಬವರ ಚಾಲಕನ ಮೃತದೇಹ ಆಂಧ್ರಪ್ರದೇಶದ ಕಣೇಕಲ್ ಹತ್ತಿರದ ಮೈಲಾಪುರ ಗ್ರಾಮದ ಹತ್ತಿರದ ಕಾಲುವೆಯಲ್ಲಿ ದೊರೆತಿದೆ. ಆದರೆ ಮಲ್ಲಿಕಾರ್ಜುನರ ಮೃತ ದೇಹ ಪತ್ತೆಯಾಗಿಲ್ಲ. ಪತ್ತೆಗೆ ಸಹಕರಿಸಬೇಕು ಎಂದು ಸಂಚಾರ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಮನವಿ ಮಾಡಿದ್ದಾರೆ.
ಮಲ್ಲಿಕಾರ್ಜುನ ಚಹರೆ: ಎತ್ತರ 5.9 ಅಡಿ, ತೆಳ್ಳನೆಯ ಮೈಕಟ್ಟು, ಉದ್ದನೆಯ ಮುಖ ಹಾಗೂ ಮೂಗು, ಗೋಧಿ ಮೈ ಬಣ್ಣ ಹೊಂದಿದ್ದಾರೆ. ಕ್ರೀಮ್ ಬಣ್ಣದ ತುಂಬು ತೋಳಿನ ಅಂಗಿ, ಹಸಿರು ಬಣ್ಣದ ಕಟ್ ಬನಿಯನ್, ಆಕಾಶ ನೀಲಿ ಬಣ್ಣದ ನಿಕ್ಕರ್, ಖಾಕಿ ಪ್ಯಾಂಟ್ ಮತ್ತು ಸೊಂಟದಲ್ಲಿ ಲೆದರ್ ಬೆಲ್ಟ್ ಧರಿಸಿದ್ದಾರೆ.
ವ್ಯಕ್ತಿಯ ಮೃತ ದೇಹದ ಮಾಹಿತಿ ಸಿಕ್ಕಲ್ಲಿ ಸಂಚಾರ ಪೊಲೀಸ್ ಠಾಣೆಯ ಪಿಐ ದೂ.08392-275722, ಮೊ.9480803048, ಬಳ್ಳಾರಿ ನಗರ ಡಿವೈಎಸ್ಪಿ ದೂ.08392-272322 ಮತ್ತು ಬಳ್ಳಾರಿ ಕಂಟ್ರೋಲ್ ರೂಂ ದೂ.08392-258100ಗೆ ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.







