ಬಳ್ಳಾರಿ: 36 ಕೆಜಿ ಗಾಂಜಾ ವಶಪಡಿಸಿಕೊಂಡ RPF

ಬಳ್ಳಾರಿ: ಬಳ್ಳಾರಿ ರೈಲ್ವೆ ನಿಲ್ದಾಣದಲ್ಲಿ ಸುಮಾರು 36 ಲಕ್ಷ ಮೌಲ್ಯದ 36 ಕೆಜಿ ಗಾಂಜಾವನ್ನು ಕಾರ್ಯಾಚರಣೆಯಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂದು ರೈಲ್ವೆ ರಕ್ಷಣಾ ಪಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶನಿವಾರ ರೈಲ್ವೆ ರಕ್ಷಣಾ ಪಡೆಯು 'ನಾರ್ಕೋಸ್' ಕಾರ್ಯಾಚರಣೆಯ ಅಡಿಯಲ್ಲಿ ವಿಶೇಷ ಕಾರ್ಯಾಚರಣ ನಡೆಸಿದಾಗ ಬಳ್ಳಾರಿ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ್ದ ತಾತನಗರ-ಯಶವಂತಪುರ ಎಕ್ಸ್‌ಪ್ರೆಸ್ ರೈಲು ಗಾಡಿಯನ್ನು ಪರಿಶೀಲಿಸಲಾಯಿತು.
ರೈಲು ಸಾಮಾನ್ಯ ಬೋಗಿ( ಜನರಲ್ ಕೋಚ್)ಯಲ್ಲಿ ಅಪರಿಚಿತವಾಗಿದ್ದ ನಾಲ್ಕು ಚೀಲಗಳನ್ನು ನೋಡಿ ಅದರ ಕುರಿತು ವಿಚಾರಿಸಿದಾಗ ಆ ಚೀಲಗಳು ತಮ್ಮ ಚೀಲಗಳು ಎಂದು ಹೇಳದ ಕಾರಣ ಚೀಲಗಳನ್ನು ಪರಿಶೀಲಿಸಲಾಯಿತು, ಆ ಸಮಯದಲ್ಲಿ ಅದರಲ್ಲಿ ಗಾಂಜಾ ಇದೆ ಎಂದು ತಿಳಿದು ಬಂದಿದೆ.
ಆ ಚೀಲಗಳಲ್ಲಿ ಸುಮಾರು ಮೂವತ್ತಾರು ಲಕ್ಷ ರೂಪಾಯಿ ಮೌಲ್ಯದ 36 ಕೆಜಿ ಗಾಂಜಾವನ್ನು ರೈಲ್ವೇ ರಕ್ಷಣಾ ಪಡೆಯವರು ವಶಪಡಿಸಿಕೊಂಡು NDPS ಕಾಯ್ದೆ ಅಡಿಯಲ್ಲಿ 1985 ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story





