ಸಂಡೂರು: ನಾರಿಹಳ್ಳ ಜಲಾಶಯಕ್ಕೆ ಮೀನುಮರಿ ದಾಸ್ತಾನು ಕಾರ್ಯಕ್ರಮ

ಬಳ್ಳಾರಿ,ಜ.14: ಜಿಲ್ಲೆಯ ಸಂಡೂರು ತಾಲೂಕಿನ ನಾರಿಹಳ್ಳ ಜಲಾಶಯಕ್ಕೆ ರಾಜ್ಯ ವಲಯ ಯೋಜನೆಯಡಿ 5.80 ಲಕ್ಷ ಬಲಿತ ಮೀನುಮರಿಗಳನ್ನು ಮಂಗಳವಾರ ದಾಸ್ತಾನು ಮಾಡಲಾಯಿತು.
ಈ ಸಂದರ್ಭದಲ್ಲಿ ಬಳ್ಳಾರಿ ವಲಯ ಮೀನುಗಾರಿಕೆ ಜಂಟಿ ನಿರ್ದೇಶಕ ಶರಣಬಸವ, ಮೀನುಗಾರಿಕೆ ಉಪನಿರ್ದೇಶಕ ಶಿವಣ್ಣ, ತಾರನಗರ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಪಂಪಾಪತಿ, ಸಂಡೂರು ತಾಲೂಕಿನ ಮೀನುಗಾರಿಕೆ ಸಹಾಯಕ ನಿರ್ದೇಶಕ ಮಂಜುನಾಥ ಕೆ.ಎಸ್ ಸೇರಿದಂತೆ ಮೀನುಗಾರಿಕೆ ಇಲಾಖೆ ಸಿಬ್ಬಂದಿ ಹಾಗೂ ಸ್ಥಳೀಯ ಮೀನುಗಾರರು ಉಪಸ್ಥಿತರಿದ್ದರು.
Next Story





