ಕಿಸಾನ್ ಸೇನಾ ಯುವ ಘಟಕದ ಕಲ್ಯಾಣ ಕರ್ನಾಟಕದ ಅಧ್ಯಕ್ಷರಾಗಿ ಶಬ್ಬೀರ್ ಎಚ್. ನೇಮಕ

ಬಳ್ಳಾರಿ / ಕಂಪ್ಲಿ: ಭಾರತೀಯ ಕ್ರಾಂತಿಕಾರಿ ಕಿಸಾನ್ ಸೇನಾ (ರಿ), ದಿಲ್ಲಿ ಇದರ ಕಲ್ಯಾಣ ಕರ್ನಾಟಕ ಯುವ ಘಟಕದ ಅಧ್ಯಕ್ಷರಾಗಿ ಎಚ್. ಶಬ್ಬೀರ್ ಅವರನ್ನು ನೇಮಕ ಮಾಡಲಾಗಿದೆ.
ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ಎಂ. ಎನ್. ಕುಕನೂರ್ ಆದೇಶದ ಮೇರೆಗೆ ಈ ನೇಮಕಾತಿ ನಡೆದಿದೆ.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಯುವಕರನ್ನು ಸಂಘಟಿಸುವುದು, ರೈತರು ಹಾಗೂ ಯುವಜನರ ಸಮಸ್ಯೆಗಳಿಗೆ ಧ್ವನಿಯಾಗುವುದು, ಸಾಮಾಜಿಕ ನ್ಯಾಯ ಮತ್ತು ಜನಪರ ಹೋರಾಟಗಳಿಗೆ ಯುವಶಕ್ತಿಯನ್ನು ಒಗ್ಗೂಡಿಸುವುದು ಹಾಗೂ ಸಂಘಟನೆಯ ಚಟುವಟಿಕೆಗಳನ್ನು ಬಲಪಡಿಸುವ ಜವಾಬ್ದಾರಿಯನ್ನು ನೂತನ ಅಧ್ಯಕ್ಷರಿಗೆ ವಹಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.
Next Story




