ಶಿವಸೇನೆಯ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿಗೆ ಬಳ್ಳಾರಿ ಪ್ರವೇಶಕ್ಕೆ ನಿರ್ಬಂಧ

ಕಲಬುರಗಿ: ಶಿವಸೇನೆಯ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿಗಳಿಗೆ ಒಂದು ವಾರಗಳ ಬಳ್ಳಾರಿ ಜಿಲ್ಲೆಯ ಪ್ರವೇಶಕ್ಕೆ ನಿರ್ಬಂಧ ಹೇರಿ, ಆದೇಶ ಹೊರಡಿಸಲಾಗಿದೆ.
ಈ ಕುರಿತು ಆದೇಶ ಹೊರಡಿಸಿರುವ ಬಳ್ಳಾರಿ ಜಿಲ್ಲಾ ಸಹಾಯಕ ಆಯುಕ್ತರು, ಬಳ್ಳಾರಿ ಜಿಲ್ಲೆಯ ಸಿರುಗುಪ್ಪದ ಹಿಂದು ಮಹಾಗಣಪತಿ ಧರ್ಮ ಸಭೆಯಲ್ಲಿ ಭಾಗಿಯಾಗುವಂತೆ ಅಲ್ಲಿನ ಮುಖಂಡರಿಂದ ಶಿವಸೇನಾ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿಗೆ ಆಹ್ವಾನ ನೀಡಲಾಗಿತ್ತು.
ಹಾಗಾಗಿ ಸ್ವಾಮೀಜಿ ಬಳ್ಳಾರಿಗೆ ಹೊರಟಿರುವ ಕಾರಣದಿಂದ ಆ ಧರ್ಮ ಸಭೆಯಲ್ಲಿ ಭಾಗಿಯಾಗದಂತೆ ತಡೆಯಲು ಬಳ್ಳಾರಿ ಪ್ರವೇಶ ನಿರ್ಬಂಧ ವಿಧಿಸಿದ ಕುರಿತಾದ ಆದೇಶ ಪ್ರತಿಯನ್ನು ಪೊಲೀಸ್ ಅಧಿಕಾರಿಗಳು ಸ್ವಾಮೀಜಿಗಳಿಗೆ ನೀಡಿದ್ದಾರೆ.
ಪೊಲೀಸರಿಂದ ಬಳ್ಳಾರಿ ಪ್ರವೇಶದ ನಿರ್ಬಂಧದ ಆದೇಶದ ಪ್ರತಿಯನ್ನು ಪಡೆದ ಸ್ವಾಮಿಜಿ, ರಾಜ್ಯ ಕಾಂಗ್ರೆಸ್ ಸರ್ಕಾರದ ಹಿಂದೂ ವಿರೋಧಿ ನೀತಿಯನ್ನು ಖಂಡಿಸುತ್ತೇವೆ ಎಂದು ಹೇಳಿದ್ದಾರೆ.
Next Story





