Siruguppa | ಸುಂಕ್ಲಮ್ಮ ದೇವಿ ದೇವಸ್ಥಾನ ಜೀರ್ಣೋದ್ಧಾರ ಕಾಮಗಾರಿಗೆ ಶಾಸಕ ಬಿ.ಎಂ.ನಾಗರಾಜ ಅಡಿಗಲ್ಲು

ಸಿರುಗುಪ್ಪ: ಕರ್ನಾಟಕ ಸರ್ಕಾರದ 2025-26ನೇ ಸಾಲಿನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮುಖ್ಯಮಂತ್ರಿ ಮೂಲಸೌಕರ್ಯ ಅಭಿವೃದ್ಧಿ ಯೋಜನೆ (ಸಿಎಂಐಡಿಪಿ) ಅಡಿಯಲ್ಲಿ ಮಂಜೂರಾದ 25 ಲಕ್ಷ ರೂ. ವೆಚ್ಚದ ಶ್ರೀ ಸುಂಕ್ಲಮ್ಮ ದೇವಿ ದೇವಸ್ಥಾನ ಜೀರ್ಣೋದ್ಧಾರ ಕಾಮಗಾರಿಗೆ ಸಿರುಗುಪ್ಪ ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಎಂ. ನಾಗರಾಜ ಅಡಿಗಲ್ಲು ನೆರವೇರಿಸಿದರು.
ನಗರದ 3ನೇ ವಾರ್ಡ್ ದೇಶನೂರು ರಸ್ತೆಯಲ್ಲಿರುವ ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ತಾಲೂಕು ಗಂಗಾಮತಸ್ಥ ಸಂಘದ ಪದಾಧಿಕಾರಿಗಳು ಶಾಸಕ ಬಿ.ಎಂ.ನಾಗರಾಜ ಅವರನ್ನು ಆತ್ಮೀಯವಾಗಿ ಸ್ವಾಗತಿಸಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಜಿಲ್ಲಾ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಎನ್. ಕರಿಬಸಪ್ಪ, ರೈತ ಸಹಕಾರ ಸಂಘದ ಅಧ್ಯಕ್ಷ ನಾಂಚಾರಯ್ಯ, ನಗರಸಭೆ ಮಾಜಿ ಅಧ್ಯಕ್ಷ ಕೆ. ಕೃಷ್ಣ, ಮಾಜಿ ಶಾಸಕ ಎಂ. ದೊಡ್ಡನಗೌಡ ಅವರ ಪುತ್ರ ಮರಿ ರಾಜೇಗೌಡ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ದಮ್ಮೂರು ಸೋಮಪ್ಪ, ನಗರಸಭೆ ಮಾಜಿ ಸದಸ್ಯರಾದ ಪೂಜಾರಿ ಪ್ಯಾಟೆಪ್ಪ, ಗೋಪಾಲ, ಪೂಜಾರಿ ಮಲ್ಲಿಕಾರ್ಜುನ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಇದೇ ವೇಳೆ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರು, ತಾಲೂಕು ಗಂಗಾಮತಸ್ಥ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಎಸ್. ಮುದುಕಪ್ಪ, ಸುಂಕಪ್ಪ, ಅಮಾಜೆಪ್ಪ, ಅನ್ಸಾರಿ ಇಸಾಕ್, ಸಲ್ವಾತ್ ಉದ್ದೀನ್, ಕಾಯಿಪಲ್ಲೆ ಆರ್. ನಾಗರಾಜ, ಬಿ. ವೆಂಕಟೇಶ್, ಹೆಚ್. ಗಣೇಶ್, ದೇಶನೂರು ನಾಗರಾಜ್, ಮೀರ್ ಹುಸೇನ್, ಎಸ್. ಮೋದಿನ್, ಚಿದಾನಂದ ರಾಯುಡು, ಜಾಜಿ ರಾಮಣ್ಣ, ಮುಲ್ಲಾ ದಾದಾ ಖಲಂದರ್, ಪರಶುರಾಮ್, ನಗರಸಭೆ ಪೌರಾಯುಕ್ತ ಗಂಗಾಧರ, ಜಿಲ್ಲಾ ಪಂಚಾಯತ್ ಇಂಜಿನಿಯರ್ ಕಾಂತರಾಜ್, ಗುತ್ತಿಗೆದಾರ ಪ್ರಹಲ್ಲಾದ ರೆಡ್ಡಿ, ಸಾಮಾಜಿಕ ಕಾರ್ಯಕರ್ತ ಅಬ್ದುಲ್ ನಬಿ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು.






