ಚನ್ನರಾಯಪಟ್ಟಣ ಹೋಬಳಿಯಲ್ಲಿ ಭೂಸ್ವಾಧೀನ: ಸಭೆಯಲ್ಲಿ ಹಾಜರಿರಲು ಭೂಮಾಲಕರಿಗೆ ಸೂಚನೆ

ಬೆಂಗಳೂರು, ಆ.30: ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಚನ್ನರಾಯಪಟ್ಟಣ ಹೋಬಳಿಯ ಗ್ರಾಮಗಳಲ್ಲಿ ಒಟ್ಟು 439 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗುತ್ತಿದ್ದು, ಸಭೆಗೆ ಹಾಜರಾಗುವಂತೆ ಭೂ ಮಾಲಕರಿಗೆ ನೋಟಿಸ್ ನೀಡಲಾಗಿದೆ.
ಸೆ.6ರಂದು ನಗರದ ನೃಪತುಂಗ ರಸ್ತೆಯಲ್ಲಿರುವ ಅರವಿಂದ ಭವನದಲ್ಲಿ ಭೂದರ ಸಲಹಾ ಸಮಿತಿ ಸಭೆಯನ್ನು ಆಯೋಜಿಸಿದೆ. ಸಭೆಯಲ್ಲಿ ಮಂಡಳಿಯ ಅಧಿಕಾರಿಗಳು ಇರಲಿದ್ದು, ನೋಟಿಸ್ ಪಡೆದ ಭೂಮಾಲಕರು ಮಾತ್ರ ಸಭೆಗೆ ಹಾಜರಾಗಬೇಕು ಎಂದು ಮಂಡಳಿಯು ತಿಳಿಸಿದೆ.
Next Story





