ವೀಲ್ಚೇರ್ ಬ್ಯಾಡ್ಮಿಂಟನ್ ವಿಭಾಗದಲ್ಲಿ ಕಂಚು: ಪಲ್ಲವಿಗೆ ಡಿಸಿಎಂ ಡಾ.ಪರಮೇಶ್ವರ್ ಅಭಿನಂದನೆ

ಬೆಂಗಳೂರು : ಜಪಾನ್‍ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ ಏಷ್ಯನ್ ಪ್ಯಾರಾ ಗೇಮ್ಸ್-2026ರ ವನಿತೆಯರ ವೀಲ್ಚೇರ್ ಬ್ಯಾಡ್ಮಿಂಟನ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದು, ಜಾಗತಿಕ ಕ್ರೀಡಾ ರಂಗದಲ್ಲಿ ಕರ್ನಾಟಕದ ಹಿರಿಮೆಯನ್ನು ಹೆಚ್ಚಿಸಿರುವ ಪಲ್ಲವಿ ಕಾಲುವೆಹಳ್ಳಿ ಮಂಜುನಾಥ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಗುರುವಾರ ಈ ಸಂಬಂಧ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಅವರು, ದೈಹಿಕ ನ್ಯೂನತೆಗಳನ್ನು ಮೀರಿ ಸಾಧನೆಯ ಶಿಖರವೇರಬೇಕೆಂಬ ಅವರ ಅಚಲ ಸಂಕಲ್ಪ ಇಂದು ನಾಡಿಗೆ ಹೆಮ್ಮೆ ತಂದಿದೆ. ಕ್ರೀಡಾಪಟುಗಳ ಪ್ರತಿಭೆಗೆ ಸೂಕ್ತ ಪ್ರೋತ್ಸಾಹ ಮತ್ತು ಬೆಂಬಲ ನೀಡುವ ಮೂಲಕ ಅವರ ಕನಸುಗಳು ನನಸಾಗಲು ನೆರವಾಗಲು ನಮ್ಮ ಸರಕಾರ ಬದ್ಧವಾಗಿದೆ ಎಂದು ಹೇಳಿದ್ದಾರೆ.
ಪಲ್ಲವಿ ಅವರ ಸಾಧನೆಯ ಪಯಣ ಇನ್ನಷ್ಟು ಯಶಸ್ಸಿನೊಂದಿಗೆ ಮುಂದುವರಿಯಲಿ, ಮುಂಬರುವ ಸ್ಪರ್ಧೆಗಳಲ್ಲಿ ಮತ್ತಷ್ಟು ಪದಕಗಳು ಅವರದಾಗಲಿ ಎಂದು ಪರಮೇಶ್ವರ್ ಹಾರೈಸಿದ್ದಾರೆ.
ಜಪಾನ್‌ನ ಐಚಿ–ನಗೋಯಾದಲ್ಲಿ ನಡೆಯುತ್ತಿರುವ ಏಷ್ಯನ್ ಪ್ಯಾರಾ ಗೇಮ್ಸ್–2026ರ ವನಿತೆಯರ ವೀಲ್ಚೇರ್ ಬ್ಯಾಡ್ಮಿಂಟನ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದು, ಜಾಗತಿಕ ಕ್ರೀಡಾ ರಂಗದಲ್ಲಿ ಕರ್ನಾಟಕದ ಹಿರಿಮೆಯನ್ನು ಹೆಚ್ಚಿಸಿರುವ ಪಲ್ಲವಿ ಕಾಲುವೆಹಳ್ಳಿ ಮಂಜುನಾಥ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.
ದೈಹಿಕ ನ್ಯೂನತೆಗಳನ್ನು ಮೀರಿ ಸಾಧನೆಯ ಶಿಖರವೇರಬೇಕೆಂಬ ಅವರ ಅಚಲ ಸಂಕಲ್ಪ ಇಂದು ನಾಡಿಗೆ ಹೆಮ್ಮೆ ತಂದಿದೆ.
ಕ್ರೀಡಾಪಟುಗಳ ಪ್ರತಿಭೆಗೆ ಸೂಕ್ತ ಪ್ರೋತ್ಸಾಹ ಮತ್ತು ಬೆಂಬಲ ನೀಡುವ ಮೂಲಕ ಅವರ ಕನಸುಗಳು ನನಸಾಗಲು ನೆರವಾಗಲು ನಮ್ಮ ಸರ್ಕಾರ ಬದ್ಧವಾಗಿದೆ. ಪಲ್ಲವಿ ಅವರ ಸಾಧನೆಯ ಪಯಣ ಇನ್ನಷ್ಟು ಯಶಸ್ಸಿನೊಂದಿಗೆ ಮುಂದುವರಿಯಲಿ, ಮುಂಬರುವ ಸ್ಪರ್ಧೆಗಳಲ್ಲಿ ಮತ್ತಷ್ಟು ಪದಕಗಳು ಅವರದಾಗಲಿ ಎಂದು ಹಾರೈಸುತ್ತೇನೆ.
Heartiest congratulations to Pallavi Kaluvehalli Manjunath on winning a Bronze Medal in Women’s Wheelchair Badminton at the Asian Para Games 2026, being held in Aichi-Nagoya, Japan, and bringing pride to Karnataka on the global sporting stage.
Her unwavering determination to overcome physical challenges and rise to greater heights has made the entire State proud.
Our Government is committed to supporting and encouraging sportspersons so that their talent is nurtured and their dreams can become reality. Wishing Pallavi continued success in her sporting journey and many more medals in the competitions ahead.
— Dr. G Parameshwara (@DrParameshwara) October 22, 2026






