ʼನಮ್ಮ ಕ್ಲಿನಿಕ್ʼಗಳಿಗೆ 78.43 ಕೋಟಿ ರೂ. ಮಂಜೂರು

PC : freepik
ಬೆಂಗಳೂರು, ಸೆ.19: ರಾಜ್ಯ ಸರಕಾರವು ನಗರ ಪ್ರದೇಶಗಳಲ್ಲಿ ವಾಸಿಸುವ ಬಡ, ಕೊಳೆಗೇರಿ ಮತ್ತು ವಲಸೆ ಬರುವ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ಸ್ಥಾಪಿಸಿರುವ 817 ನಮ್ಮ ಕ್ಲಿನಿಕ್ ಕೇಂದ್ರಗಳಿಗೆ ವಿವಿಧ ಔಷಧಗಳನ್ನು ಖರೀದಿ ಮಾಡಲು 78.43 ಕೋಟಿ ರೂ.ಗಳನ್ನು ಮಂಜೂರು ಮಾಡಿದೆ.
2021-22ನೇ ಸಾಲಿನಿಂದ 2025-26ನೇ ಸಾಲಿನವರೆಗೆ ಒಟ್ಟು 817 ನಮ್ಮ ಕ್ಲಿನಿಕ್ ಗಳು ಅನುಮೋದನೆಯಾಗಿದ್ದು, ಈವರೆಗೆ 724 ನಮ್ಮ ಕ್ಲಿನಿಕ್ಗಳನ್ನು ಅನುಷ್ಠಾನಗೊಳಿಸಲಾಗಿದೆ. ಬಾಕಿ ಇರುವ 93 ನಮ್ಮ ಕ್ಲಿನಿಕ್ಗಳನ್ನು ಸೆ.30ರೊಳಗೆ ಅನುಷ್ಠಾನಗೊಳಿಸಲು ಕ್ರಮವಹಿಸಲಾಗಿದೆ. ನಗರದ ಜನರು ಆರೋಗ್ಯ ಸೇವೆ ಪಡೆಯಲು ತಗುಲುವ ವೆಚ್ಚವನ್ನು ಕಡಿಮೆ ಮಾಡಲು ನಮ್ಮ ಕ್ಲಿನಿಕ್ಗಳು ಸಹಕಾರಿಯಾಗಿದೆ ಎಂದು ಆದೇಶದಲ್ಲಿ ತಿಳಿಸಿದೆ.
Next Story





