ಬೆಂಗಳೂರು | ಲಾಲ್‍ಬಾಗ್ ಕೆರೆಯಲ್ಲಿ ಮಹಿಳೆಯ ಶವ ಪತ್ತೆ!

ಬೆಂಗಳೂರು, ಆ.24: ಇಲ್ಲಿನ ಲಾಲ್‍ಬಾಗ್ ಕೆರೆಯಲ್ಲಿ ಮಹಿಳೆಯ ಶವ ಪತ್ತೆಯಾಗಿದ್ದು, ಮೃತರನ್ನು ನೇಪಾಳದ ಜೇನಿ ಶಾ ಎಂದು ಸ್ಥಳೀಯ ಪೊಲೀಸರು ಪತ್ತೆ ಹಚ್ಚಿದ್ದಾರೆ. ಮನನೊಂದು
ಮಹಿಳೆ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಶಂಕಿಸಲಾಗಿದೆ. ಪತಿಯೊಂದಿಗೆ ಸರ್ಜಾಪುರದಲ್ಲಿ ವಾಸವಿದ್ದ ಜೇನಿ ಶಾ, ನಾಲ್ಕು ದಿನಗಳ ಹಿಂದಷ್ಟೇ ವಾಣಿವಿಲಾಸ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಹೆರಿಗೆಯ ನಂತರ ಮಗುವಿನ ಆರೋಗ್ಯ ಸರಿಯಿರಲಿಲ್ಲವೆಂದು ಅವರು ಮಾನಸಿಕವಾಗಿ ನೊಂದಿದ್ದರು ಎನ್ನಲಾಗಿದೆ. ಪತ್ನಿ ಆಸ್ಪತ್ರೆಯಿಂದ ನಾಪತ್ತೆಯಾಗಿದ್ದಾಳೆ ಎಂದು ಆ.23ರಂದು ಆಕೆಯ ಪತಿ ಪೊಲೀಸ್ ಠಾಣೆಗೆ ದೂರು ನೀಡಲು ಬಂದಿದ್ದರು.
ಈ ಸಂದರ್ಭದಲ್ಲಿ ಲಾಲ್‍ಬಾಗ್ ಕೆರೆಯಲ್ಲಿ ಪತ್ತೆಯಾದ ಅಪರಿಚಿತ ಮೃತದೇಹವನ್ನು ತೋರಿಸಿದಾಗ ಆಕೆಯ ಪತಿ ಗುರುತಿಸಿದ್ದಾರೆ. ಮಗುವಿನ ಆರೋಗ್ಯ ಸರಿಯಾಗಿಲ್ಲ ಎಂದು ಬೇಸತ್ತು ಜೇನಿ ಶಾ ಆತ್ಮಹತ್ಯೆಗೆ ಶರಣಾಗಿರಬಹುದು. ಹೀಗಾಗಿ ಅಸಹಜ ಸಾವಿನ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಸಿದ್ದಾಪುರ ಠಾಣೆ ಪೊಲೀಸರು ತಿಳಿಸಿದ್ದಾರೆ.





