ಬೆಂಗಳೂರು ವಿವಿ ಅತಿಥಿ ಉಪನ್ಯಾಸಕಿಗೆ ಲೈಂಗಿಕ ಕಿರುಕುಳ ಆರೋಪ : ಐವರು ಉಪನ್ಯಾಸಕರ ವಿರುದ್ಧ ಎಫ್ಐಆರ್

ಸಾಂದರ್ಭಿಕ ಚಿತ್ರ | PC : freepik
ಬೆಂಗಳೂರು, ಸೆ.20 : ಬೆಂಗಳೂರು ವಿಶ್ವವಿದ್ಯಾಲಯದ ಅತಿಥಿ ಉಪನ್ಯಾಸಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ವಿ.ವಿ.ಯ ಐವರು ಉಪನ್ಯಾಸಕರ ವಿರುದ್ಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿರುವುದಾಗಿ ವರದಿಯಾಗಿದೆ.
ಸಂತ್ರಸ್ತ ಅತಿಥಿ ಉಪನ್ಯಾಸಕಿ ನೀಡಿದ ದೂರಿನ ಆಧಾರದ ಮೇಲೆ ಬೆಂಗಳೂರು ವಿವಿಯ ಉಪನ್ಯಾಸಕರಾದ ಸ್ವರೂಪ್ ಕುಮಾರ್, ರಾಮಾಂಜನೇಯ, ರಂಗಸ್ವಾಮಿ, ಜಗನ್ನಾಥ ಹಾಗೂ ಶಿವರಾಮ್ ಎಂಬುವರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಈ ಪ್ರಕರಣದ ವ್ಯಾಪ್ತಿ ರಾಮನಗರಕ್ಕೆ ಬರುವ ಹಿನ್ನೆಲೆ ರಾಮನಗರ ಠಾಣೆಗೆ ಎಫ್ಐಆರ್ ವರ್ಗಾಹಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಐವರು ಆರೋಪಿ ಉಪನ್ಯಾಸಕರು ವಿವಿಧ ಸಂದರ್ಭಗಳಲ್ಲಿ ಅತಿಥಿ ಉಪನ್ಯಾಸಕಿಗೆ ಲೈಂಗಿಕ ಕಿರುಕುಳ ನೀಡಿದ್ದು, ಜ್ಞಾನಭಾರತಿ ಆವರಣದಲ್ಲೇ ಈ ಕೃತ್ಯ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಇಂಟರ್ನಲ್ ಮಾರ್ಕ್ಸ್ ನೀಡಲು ಲಂಚಕ್ಕೆ ಬೇಡಿಕೆ!
ವಿ.ವಿ.ಯ ಸಮಾಜಶಾಸ್ತ್ರ ವಿಭಾಗದ ಉಪನ್ಯಾಸಕ ರಾಮಾಂಜನೇಯ ಅವರ ವಿರುದ್ಧ ಇಂಟರ್ನಲ್ ಮಾರ್ಕ್ಸ್ ನೀಡಲು ಹಣಕ್ಕೆ ಬೇಡಿಕೆ ಇಟ್ಟ ಆರೋಪವೂ ಸಹ ಕೇಳಿಬಂದಿದೆ. ಅಂಧ ವಿದ್ಯಾರ್ಥಿಯೊಬ್ಬನಿಗೆ ಇಂಟರ್ನಲ್ ನೀಡಲು ಸಾವಿರಾರು ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಲಾಗಿದೆ.







