Bengaluru | ಶಿಕ್ಷಕರ ವೇತನ ಬಿಡುಗಡೆಗೆ ಎ.ಪಿ.ರಂಗನಾಥ್ ಮನವಿ

ಬೆಂಗಳೂರು : ಅನುದಾನಿತ ಶಾಲೆಗಳ ನವೀಕರಣ, ಶಿಕ್ಷಕರ ವೇತನ ಬಿಡುಗಡೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ರಾಜ್ಯ ಸರಕಾರ ತುರ್ತು ಈಡೇರಿಸಬೇಕು ಎಂದು ವಿಧಾನ ಪರಿಷತ್‌ನ ನೂತನ ಸದಸ್ಯ ಎ.ಪಿ.ರಂಗನಾಥ್ ಮನವಿ ಮಾಡಿದ್ದಾರೆ.
ನಗರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಕಚೇರಿಯಲ್ಲಿ ಅಪರ ಮುಖ್ಯ ಕಾರ್ಯದರ್ಶಿ ರಶ್ಮಿ ವಿ.ಮಹೇಶ್ ಅವರನ್ನು ಭೇಟಿ ಮಾಡಿದ ಎ.ಪಿ.ರಂಗನಾಥ್ ನೇತೃತ್ವದ ನಿಯೋಗ, ಅನುದಾನಿತ ಶಾಲೆಗಳ ನವೀಕರಣ ಮತ್ತು ಶಿಕ್ಷಕರ ವೇತನ ಬಿಡುಗಡೆಗೆ ಇಲಾಖೆಯ ಅಧಿಕಾರಿಗಳು ಒತ್ತು ನೀಡಬೇಕು ಎಂದು ಕೋರಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಎ.ಪಿ.ರಂಗನಾಥ್, ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ವೃಂದದಿಂದ ಪ್ರಾಂಶುಪಾಲರ ಹುದ್ದೆಗೆ ಶೀಘ್ರದಲ್ಲಿ ಮುಂಭಡ್ತಿ ನೀಡಿ, ಸ್ಥಳನಿಯುಕ್ತಿಗೊಳಿಸಲು, ಮುಂಬರುವ ಜನಗಣತಿ ಕಾರ್ಯಕ್ಕೆ ಶಿಕ್ಷಕರು ಹಾಗೂ ಉಪನ್ಯಾಸಕರನ್ನು ನಿಯೋಜನೆ ಮಾಡದಂತೆ ಮನವಿ ಸಲ್ಲಿಸಲಾಗಿದೆ ಎಂದರು.
Next Story




