Bengaluru | ಸಾಲದ ಹಣ ಹಿಂತಿರುಗಿಸದಕ್ಕೆ ತಂಗಿ-ಮೈದುನನ ಅಪಹರಿಸಿ ಹಲ್ಲೆ: ಅಕ್ಕ-ಭಾವ ಸಹಿತ ಮೂವರ ಬಂಧನ

ಸಾಂದರ್ಭಿಕ ಚಿತ್ರ (AI)
ಬೆಂಗಳೂರು: ಸಾಲದ ಹಣವನ್ನು ಹಿಂತಿರುಗಿಸದ ಕಾರಣ ತಂಗಿ ಮತ್ತು ಮೈದುನನನ್ನು ಅಪಹರಿಸಿ ಹಲ್ಲೆ ಮಾಡಿದ ಆರೋಪದಡಿ ಅಕ್ಕ ಮತ್ತು ಭಾವ ಸೇರಿದಂತೆ ಮೂವರು ಆರೋಪಿಗಳನ್ನು ಇಲ್ಲಿನ ಹೆಬ್ಬಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಹಲ್ಲೆಗೊಳಗಾದ ಪೃಥ್ವಿ ಎಂಬವರು ನೀಡಿದ ದೂರಿನನ್ವಯ ಸಹೋದರಿ ಪ್ರಪುಲ್ಲಾ, ಭಾವ ಸಲೀಂ ಶೇಕ್, ಈತನ ಸಹಚರ ಬಿರೇಶ್ ಎಂಬವರನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹೆಬ್ಬಗೋಡಿಯ ಅನಂತನಗರದಲ್ಲಿ ವಾಸವಾಗಿರುವ ದೂರುದಾರ ಮಹಿಳೆ ಹಾಗೂ ಪತಿ ಅಭಿಜಿತ್ ಅವರ ಮನೆಗೆ ಎ.14ರ ರಾತ್ರಿ ಆರೋಪಿಗಳು ಬಂದು ಏಕಾಏಕಿ ಹಲ್ಲೆ ನಡೆಸಿದ್ದಾರೆ. ಹಣಕಾಸಿನ ವ್ಯವಹಾರ ಸಂಬಂಧ ಪೊಲೀಸ್ ಠಾಣೆಗೆ ಕರೆದೊಯ್ಯುವುದಾಗಿ ಹೇಳಿ ಕಾರಿನಲ್ಲಿ ಕೂರಿಸಿ ಅಪಹರಿಸಿದ್ದರು. ಮಾರ್ಗ ಮಧ್ಯೆ ಕಾರಿನಿಂದ ಇಳಿದು ಪರಾರಿಗೆ ಯತ್ನಿಸಿದರೂ ಹಲ್ಲೆ ಮಾಡಿ ನಾಗರಬಾವಿಯಲ್ಲಿ ಮನೆಗೆ ಕರೆದೊಯ್ದು ಗೃಹಬಂಧನದಲ್ಲಿ ಇರಿಸಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.
Next Story




