Bengaluru | ʼಮೆಟ್ರೋʼ ನೇರಳೆ ಮಾರ್ಗದಲ್ಲಿ ಟ್ರ್ಯಾಕ್ಗೆ ಇಳಿದ ವ್ಯಕ್ತಿ; ಸಂಚಾರದಲ್ಲಿ ಕೆಲಕಾಲ ವಿಳಂಬ

ಸಾಂದರ್ಭಿಕ ಚಿತ್ರ
ಬೆಂಗಳೂರು : ನಮ್ಮ ಮೆಟ್ರೋ ರೈಲ್ವೆಯ ನೇರಳೆ ಮಾರ್ಗದಲ್ಲಿ ವ್ಯಕ್ತಿಯೊಬ್ಬ ಟ್ರ್ಯಾಕ್ಗೆ ಇಳಿದ ಘಟನೆ ವಿಜಯನಗರ ಮೆಟ್ರೋ ನಿಲ್ದಾಣದಲ್ಲಿ ನಡೆದಿದೆ.
ಮಂಗಳವಾರ ಮಧ್ಯಾಹ್ನ 1.41ರ ಸುಮಾರಿಗೆ ನಮ್ಮ ಮೆಟ್ರೋ ರೈಲು ಬರುವ ವೇಳೆ ವ್ಯಕ್ತಿ ಏಕಾಏಕಿ ಟ್ರ್ಯಾಕ್ಗೆ ಇಳಿದಿದ್ದಾನೆ. ಇದರಿಂದ ಮೆಟ್ರೋ ನೇರಳೆ ಮಾರ್ಗದ ಸಂಚಾರದಲ್ಲಿ ಕೆಲಕಾಲ ವಿಳಂಬವಾಗಿದೆ. ಈ ಹಠಾತ್ ಘಟನೆ ಹಿನ್ನೆಲೆ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಮೆಟ್ರೋ ಟ್ರ್ಯಾಕ್ಗೆ ಇಳಿದ ವ್ಯಕ್ತಿ ಈ ಕುರಿತಾಗಿ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಟ್ವೀಟ್ ಮೂಲಕ ಮಾಹಿತಿ ನೀಡಿದೆ. ಮಧ್ಯಾಹ್ನ, ವಿಜಯನಗರ ಮೆಟ್ರೋ ನಿಲ್ದಾಣದಲ್ಲಿ ರೈಲು ಪ್ಲಾಟ್ಫಾರ್ಮ್ಗೆ ಆಗಮಿಸುತ್ತಿದ್ದ ಸಂದರ್ಭದಲ್ಲಿ ಪ್ರಯಾಣಿಕರೊಬ್ಬರು ಅಪ್ ಟ್ರ್ಯಾಕ್ಗೆ ಹಾರಿದ್ದಾರೆ. ತಕ್ಷಣವೇ ನಿಲ್ದಾಣದ ಅಧಿಕಾರಿಗಳು ತುರ್ತು ಕ್ರಮಗಳನ್ನು ಕೈಗೊಂಡು, ಸಂಬಂಧಪಟ್ಟ ವ್ಯಕ್ತಿಯನ್ನು ರಕ್ಷಿಸಿ ವೈದ್ಯಕೀಯ ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ತಿಳಿಸಿದೆ.
Next Story




