ಬೆಂಗಳೂರು: ವಿದ್ಯುತ್ ಕಂಬದ ಮೇಲೆ ಕುಳಿತಿದ್ದ ವಿದೇಶಿ ತಳಿಯ ಗಿಳಿಯನ್ನು ರಕ್ಷಿಸಲು ಹೋದ ಯುವಕ ಸಾವು

ಬೆಂಗಳೂರು: ವಿದ್ಯುತ್ ಕಂಬದ ಮೇಲೆ ಕುಳಿತಿದ್ದ ವಿದೇಶಿ ಗಿಳಿಯನ್ನು ರಕ್ಷಿಸಲು ಹೋಗಿ ಯುವಕನೋರ್ವ ಸಾವನ್ನಪ್ಪಿರುವಂತಹ ಘಟನೆ ಇಲ್ಲಿನ ಗಿರಿನಗರದ ಖಾಸಗಿ ಅಪಾರ್ಟ್‍ಮೆಂಟ್‍ನಲ್ಲಿ ನಡೆದಿದೆ. ಅರುಣ್ ಕುಮಾರ್(32) ಮೃತ ಯುವಕ.
ಮೂಲತಃ ಅರುಣ್ ಕುಮಾರ್ ಮಂಡ್ಯದ ನಾಗಮಂಗಲದವರಾಗಿದ್ದಾರೆ. ಅರುಣ್ ತಂದೆ ಮೃತರಾಗಿದ್ದು, ತಾಯಿಗೆ ಒಬ್ಬನೇ ಮಗನಾಗಿದ್ದರು. ತಮ್ಮ ಚಿಕ್ಕಮ್ಮನ ಮನೆಗೆ ಆಗಾಗ ಬಂದು ಉಳಿದುಕೊಳ್ಳುತ್ತಿದ್ದರು.
ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮಾಡಲಾಗಿದ್ದು, ಗಿರಿನಗರ ಠಾಣೆಯಲ್ಲಿ ಯುಡಿಆರ್ ದಾಖಲಾಗಿದೆ.
ಸುಮಾರು 2 ಲಕ್ಷ ರೂ. ಬೆಲೆ ಬಾಳುವ ವಿದೇಶಿ ಗಿಳಿಯೊಂದು ಖಾಸಗಿ ಅಪಾರ್ಟ್‍ಮೆಂಟ್ ಒಳಭಾಗದಲ್ಲಿರುವ 65 ಸಾವಿರ ಕೆವಿ ಸಾಮರ್ಥ್ಯದ ವಿದ್ಯುತ್ ಕಂಬದ ಮೇಲೆ ಕುಳಿತಿತ್ತು. ಇದನ್ನು ನೋಡಿದ ಅರುಣ್ ಕುಮಾರ್ ಗಿಳಿ ರಕ್ಷಣೆಗೆ ಮುಂದಾಗಿದ್ದಾರೆ. ಅಪಾರ್ಟ್‍ಮೆಂಟ್ ಕಾಪೌಂಡ್ ಮೇಲೆ ನಿಂತು ಕಬ್ಬಿಣದ ಸಲಾಕೆಗೆ ಕಟ್ಟಿಗೆ ಸೇರಿಸಿ ಓಡಿಸಲು ಪ್ರಯತ್ನಿಸಿದ್ದಾರೆ. ಈ ವೇಳೆ ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿದ್ದಾರೆ.
Next Story





