ಪಿಜಿ ವೈದ್ಯಕೀಯ: ನ.13ರ ವರೆಗೆ ಶುಲ್ಕ ಪಾವತಿ ದಿನಾಂಕ ವಿಸ್ತರಣೆ

ಬೆಂಗಳೂರು : ಸ್ನಾತಕೋತ್ತರ ವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ ಮೊದಲ ಸುತ್ತಿನಲ್ಲಿ ಸೀಟು ಹಂಚಿಕೆಯಾದವರಿಗೆ ಆಯ್ಕೆ ದಾಖಲಿಸಿ, ಶುಲ್ಕ ಪಾವತಿಸಲು ನ.13ರವರೆಗೆ ದಿನಾಂಕ ವಿಸ್ತರಿಸಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಒಟ್ಟು 3,268 ಮಂದಿಗೆ ಮೊದಲ ಸುತ್ತಿನಲ್ಲಿ ಸೀಟು ಹಂಚಿಕೆಯಾಗಿದ್ದು, ಇವರಲ್ಲಿ ಒಟ್ಟು 164 ಮಂದಿ ಯಾವ ಆಯ್ಕೆ ದಾಖಲಿಸಿಲ್ಲ. ಹಾಗೆಯೇ 81 ಮಂದಿ ಆಯ್ಕೆ ದಾಖಲಿಸಿದ್ದರೂ ಹಣ ಪಾವತಿ ಮಾಡಿಲ್ಲ ಎಂದು ಅವರು ತಿಳಿಸಿದ್ದಾರೆ.
ಈ ಕಾರಣಕ್ಕೆ ಸೀಟು ಹಂಚಿಕೆಯಾದವರಿಗೆ ನ.13ರಂದು ಮಧ್ಯಾಹ್ನ 2ಗಂಟೆವರೆಗೆ ಆಯ್ಕೆ ದಾಖಲಿಸಲು ಅವಕಾಶ ನೀಡಲಾಗಿದೆ. ಆಯ್ಕೆ- 1 ಮತ್ತು 2 ದಾಖಲಿಸಿದವರು ನ.13ರಂದು ಸಂಜೆ 4ಗಂಟೆವರೆಗೆ ಚಲನ್ ಡೌನ್ಲೋಡ್ ಮಾಡಿಕೊಂಡು ಶುಲ್ಕ ಪಾವತಿಸಬೇಕು. ನ.14ರೊಳಗೆ ಕಾಲೇಜುಗಳಲ್ಲಿ ವರದಿ ಮಾಡಿಕೊಳ್ಳಬೇಕು ಎಂದು ಅವರು ವಿವರಿಸಿದ್ದಾರೆ.
Next Story




