ಕೆ.ಪಿ. ಸುರೇಶ ಕಂಜರ್ಪಣೆಯವರ ಹೊಸ ಕವನ ಸಂಕಲನ ‘ಅಂದಿಂದೆಂದೂ’ ಬಿಡುಗಡೆ

ಬೆಂಗಳೂರು: ಕೆ.ಪಿ. ಸುರೇಶ ಕಂಜರ್ಪಣೆ ಅವರ ಹೊಸ ಕವನ ಸಂಕಲನ ‘ಅಂದಿಂದೆಂದೂ’ ಕೃತಿಯ ಸರಳ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಕಾರ್ಯಕ್ರಮದಲ್ಲಿ ವಿಜಯಮ್ಮ, ಬಿ. ಸುರೇಶ್–ಗುರುಮೂರ್ತಿ ದಂಪತಿ, ಶಿವಸುಂದರ್, ವಿ.ಎಸ್. ಶ್ರೀಧರ್–ಮಂಗಳಾ ದಂಪತಿ, ಪುಷ್ಪಾ ಹಾಗೂ ಕಾನ್ಕೇವ್ ಪ್ರಕಾಶನದ ನಂದೀಶ್ ಅವರು ಉಪಸ್ಥಿತರಿದ್ದರು.
ನಾಕುತಂತಿ ಪ್ರಕಾಶನದಿಂದ ಪ್ರಕಟಗೊಂಡಿರುವ ಈ ಕವನ ಸಂಕಲನದ ಬಿಡುಗಡೆ ಬಳಿಕ, ಕವಿ ಕೆ.ಪಿ. ಸುರೇಶ ಹಾಗೂ ಬಿ. ಸುರೇಶ್ ಅವರು ಕೃತಿಯಲ್ಲಿನ ಕೆಲವು ಆಯ್ದ ಕವನಗಳನ್ನು ವಾಚಿಸಿದರು.
ಕೃತಿಯ ಮಾರಾಟದ ಜವಾಬ್ದಾರಿಯನ್ನು ಕಾನ್ಕೇವ್ ಪ್ರಕಾಶನ ವಹಿಸಿಕೊಂಡಿದೆ.
Next Story





