Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಬೆಂಗಳೂರು
  3. ವೈಚಾರಿಕತೆ, ವೈಜ್ಞಾನಿಕತೆಯ ನೆಲೆಯಲ್ಲಿ...

ವೈಚಾರಿಕತೆ, ವೈಜ್ಞಾನಿಕತೆಯ ನೆಲೆಯಲ್ಲಿ ಕನ್ನಡ ಚಳುವಳಿ ಕಟ್ಟಿದ ಹೋರಾಟಗಾರ ಜಾಣಗೆರೆ ವೆಂಕಟರಾಮಯ್ಯ: ಎಲ್.ಹನುಮಂತಯ್ಯ

“ಜಾಣಗೆರೆ-75 ಅಭಿನಂದನಾ ಸಮಾರಂಭ”

ವಾರ್ತಾಭಾರತಿವಾರ್ತಾಭಾರತಿ29 Aug 2026 8:49 PM IST
share
ವೈಚಾರಿಕತೆ, ವೈಜ್ಞಾನಿಕತೆಯ ನೆಲೆಯಲ್ಲಿ ಕನ್ನಡ ಚಳುವಳಿ ಕಟ್ಟಿದ ಹೋರಾಟಗಾರ ಜಾಣಗೆರೆ ವೆಂಕಟರಾಮಯ್ಯ: ಎಲ್.ಹನುಮಂತಯ್ಯ

ಬೆಂಗಳೂರು : ವೈಚಾರಿಕತೆ ಮತ್ತು ವೈಜ್ಞಾನಿಕತೆಯ ನೆಲೆಯಲ್ಲಿ ಕನ್ನಡ ಚಳುವಳಿಯನ್ನು ಕಟ್ಟಿದ ಹೋರಾಟಗಾರರಲ್ಲಿ ಜಾಣಗೆರೆ ವೆಂಕಟರಾಮಯ್ಯ ಕೂಡ ಒಬ್ಬರು ಎಂದು ರಾಜ್ಯಸಭಾ ಮಾಜಿ ಸದಸ್ಯ, ಹಿರಿಯ ಕವಿ ಎಲ್.ಹನುಮಂತಯ್ಯ ಅಭಿಪ್ರಾಯಪಟ್ಟಿದ್ದಾರೆ.

ಶನಿವಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ‘ಜಾಣಗೆರೆ-75 ಅಭಿನಂದನಾ ಸಮಾರಂಭ’ದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವೈಚಾರಿಕ ಕನ್ನಡ ನೆಲೆಯನ್ನು ಕಟ್ಟಿರುವ, ವೈಜ್ಞಾನಿಕವಾದ ಕನ್ನಡ ಚಿಂತನೆಯನ್ನು ಬೆಳೆಸಿರುವ ಕೆಲವೇ ಕೆಲವು ಕನ್ನಡ ಹೋರಾಟಗಾರರಲ್ಲಿ ಜಾಣಗೆರೆಯೂ ಒಬ್ಬರಾಗಿದ್ದಾರೆ ಎಂದರು.

ವೈಚಾರಿಕ ಮತ್ತು ವೈಜ್ಞಾನಿಕವಾದದ ಮೂಲಕವೇ ಕನ್ನಡ ಚಳುವಳಿ ಬೆಳೆಯಬೇಕೆಂದು ಕುವೆಂಪು ಹೇಳಿಕೊಟ್ಟಿದ್ದರು. ಅದರಂತೆ ಜಾಣಗೆರೆಯಂತಹ ಹೋರಾಟಗಾರರು ದಾರಿ ತೋರಿಸಿಕೊಟ್ಟಿದ್ದಾರೆ. ಆದರೆ, ನಾವುಗಳು ಆ ಮಾರ್ಗವನ್ನು ಅನುಸರಿಸದೇ ನಮ್ಮ ಆತ್ಮಗಳಿಗೆ ಮತ್ತು ಇಡೀ ಕನ್ನಡ ಸಾಹಿತ್ಯ ಪರಂಪರೆಗೆ ದ್ರೋಹ ಬಗೆದಂತೆ ಮಾಡುತ್ತಿದ್ದೇವೆ ಎಂದು ಎಲ್.ಹನುಮಂತಯ್ಯ ಹೇಳಿದರು.

ಒಂದು ಕಾಲದ ಕನ್ನಡ ಚಳುವಳಿಯಲ್ಲಿ ಜಾಣಗೆರೆ ವೆಂಕಟರಾಮಯ್ಯನವರದ್ದು ಬಹಳ ದೊಡ್ಡ ಹೆಸರು. ಹಿಂದೆ ಬೆಂಗಳೂರಿನಲ್ಲಿ ಕನ್ನಡ ಮಾತನಾಡುವ ಜನರೇ ಇರಲಿಲ್ಲ. ತಮಿಳು ಭಾಷಿಗರು ಹೆಚ್ಚಿದ್ದರು. ಅಂತಹ ಕಾಲದಲ್ಲಿ ಜಾಣಗೆರೆಯವರು ಕನ್ನಡ ಚಳುವಳಿಯನ್ನು ಪ್ರಾರಂಭಿಸಿದರು ಎಂದು ಎಲ್.ಹನುಮಂತಯ್ಯ ಹೇಳಿದರು.

ಜಾಣಗೆರೆಯವರು ಬೆಂಗಳೂರಿನಲ್ಲಿ ವಾಸಿಸುತ್ತಿದ್ದ ಶ್ರಮಿಕ ತಮಿಳಿಗರನ್ನು ವಿರೋಧಿಸದೆ, ಅವರಿಗೆ ಕನ್ನಡವನ್ನು ಕಲಿಸಿ, ಏಕಾಏಕಿ ಅವರನ್ನು ಹೊರದಬ್ಬಿದರೆ ಅವರ ಬದುಕು ಅತಂತ್ರವಾಗುತ್ತದೆ. ಶ್ರಮಿಕ ತಮಿಳಿಗರು ಇಲ್ಲಿಗೆ ಹೊಟ್ಟೆಪಾಡಿಗಾಗಿ ಬಂದವರು ಎಂಬ ತಾಯಿ ಹೃದಯವನ್ನು ತೋರಿದ್ದರು ಎಂದು ಎಲ್.ಹನುಮಂತಯ್ಯ ಮೆಲುಕು ಹಾಕಿದರು.

ಕನ್ನಡ ಚಳುವಳಿಯಲ್ಲಿ ಹಿಂದೆ ವಿವೇಕವಂತರು ಇದ್ದರು. ಜೊತೆಗೆ, ವಿವೇಕವನ್ನು ಮೈಗೂಡಿಸಿಕೊಂಡವರೂ ಇದ್ದರು. ಜಾಣಗೆರೆಯವರು ಎಲ್ಲ ಕಾಲದಲ್ಲಿ ಕನ್ನಡ ಚಳುವಳಿಗಾರರಿಗೆ ವಿವೇಕವನ್ನು ಕಲಿಸಿದ ಮತ್ತು ತಾನು ತುಂಬು ವಿವೇಕದಿಂದ ಕನ್ನಡ ಚಳುವಳಿಯನ್ನು ನಡೆಸಿಕೊಂಡು ಬಂದಂತಹ ನೇತಾರ ಎಂದು ಎಲ್.ಹನುಮಂತಯ್ಯ ಮೆಚ್ಚುಗೆ ವ್ಯಕ್ತಪಡಿಸಿದರು.

ಕನ್ನಡ ಚಳುವಳಿಯೆಂದರೆ ನನಗೆ ಈಗಲೂ ಬಹಳ ಗೌರವವಿರುವುದು ವಾಟಾಳ್ ನಾಗರಾಜ್‍ರ ಬಗ್ಗೆ. ಬೆಂಗಳೂರಿನಲ್ಲಿ ಕನ್ನಡ ಕಷ್ಟದಲ್ಲಿದ್ದ ಕಾಲದಲ್ಲಿ ವಾಟಾಳ್ ಅವರು ಕನ್ನಡವನ್ನು ಉಸಿರಾಡಿದ್ದರು. ಅಂತವರ ಜೊತೆಗೆ ಸರಿಸಮನಾದ ಇನ್ನೊಂದು ಹೆಸರನ್ನು ಕನ್ನಡ ಚಳುವಳಿಗೆ ನಾವು ಹೇಳಬಹುದಾದರೆ ಅದು ಜಾಣಗೆರೆ ವೆಂಕಟರಾಮಯ್ಯ ಮಾತ್ರ ಎಂದು ಎಲ್.ಹನುಮಂತಯ್ಯ ತಿಳಿಸಿದರು.

ಜಾಣಗೆರೆಯವರು ವೃತ್ತಿಯಲ್ಲಿ ಬಹಳ ನಿಷ್ಠಾವಂತ ಪತ್ರಕರ್ತರೂ ಆಗಿದ್ದವರು. ಅವರು ಲಂಕೇಶ್ ಪತ್ರಿಕೆ, ನಮ್ಮ ನಾಡು ಪತ್ರಿಕೆ, ಅಭಿಮಾನಿ ಸಂಪಾದಕರಾಗಿ ಕೆಲಸ ಮಾಡಿದ್ದಾರೆ. ನಂತರ ಅವರೇ ಸ್ವತಃ ಜಾಣಗೆರೆ ಎನ್ನುವ ಪತ್ರಿಕೆಯನ್ನೂ ಹೊರತಂದರು. ಅವರು ಕಷ್ಟ ಕಾಲದಲ್ಲೂ ಅಡ್ಡದಾರಿ ತುಳಿಯದೆ ಪತ್ರಿಕೆಯನ್ನು ನಡೆಸಿಕೊಂಡು ಬಂದರು ಎಂದು ಎಲ್.ಹನುಮಂತಯ್ಯ ತಿಳಿಸಿದರು.

ಹಿರಿಯ ವಿದ್ವಾಂಸಕ ಡಾ.ಹಂಪ ನಾಗರಾಜಯ್ಯ ಮಾತನಾಡಿ, ಕನ್ನಡ ಹೋರಾಟಗಾರರು ಬಹಳಷ್ಟಿದ್ದಾರೆ. ಹಾಗೆಯೇ ಪತ್ರಕರ್ತರೂ ಬಹಳಷ್ಟಿದ್ದಾರೆ. ಇವರಲ್ಲಿ ನಮ್ಮ ಜಾಣಗೆರೆಯವರು ವಿಭಿನ್ನ ಸಾಲಿನಲ್ಲಿ ನಿಲ್ಲುತ್ತಾರೆ. ಸಾಹಿತ್ಯ ಕ್ಷೇತ್ರದಲ್ಲೂ ಜಾಣಗೆರೆಯವರು ತಮ್ಮದೇ ಆದ ಕೊಡುಗೆ ನೀಡಿದ್ದು, ಅನೇಕ ಕಥಾ ಸಂಕಲನ, ವಿಚಾರ ಸಾಹಿತ್ಯ, ಕಾದಂಬರಿಗಳನ್ನೂ ಬರೆದಿದ್ದಾರೆ. 75 ವರ್ಷಗಳ ತುಂಬು ಜೀವನ ಸಾಗಿಸುತ್ತಾ ಮುನ್ನಡೆಯುತ್ತಿರುವ ಜಾಣಗೆರೆಯವರ ಬದುಕು ಪ್ರತಿಯೊಬ್ಬರಿಗೂ ಆದರ್ಶವಾಗಬೇಕು ಎಂದರು.

‘ಕರ್ನಾಟಕದಲ್ಲಿ ಉದ್ಯಮ ಹಾಗೂ ಉದ್ಯೋಗ’ ಎಂಬ ವಿಷಯ ಕುರಿತು ಮಾತನಾಡಿದ ಹಿರಿಯ ಪತ್ರಕರ್ತ ಪಾರ್ವತೀಶ ಬಿಳಿದಾಳೆ, ಬಂಡವಾಳ ಹೂಡಿಕೆ ಮತ್ತು ಕೃಷಿ ಭೂಮಿ ಸ್ವಾಧೀನದಿಂದ ಕೆಲವು ಉದ್ಯಮಗಳಿಗೆ ಅನುಕೂಲವಾಗಿದೆಯೇ ವಿನಃ ಸಾಮಾನ್ಯ ಕನ್ನಡಿಗರಿಗೆ ಪ್ರಯೋಜನವಾಗಿಲ್ಲ. ಇದರ ಹಿಂದೆ ಇರುವ ರಾಜಕಾರಣಿಗಳಿಗೆ ಮತ್ತು ಹೊರಗಿನವರಿಗೆ ವರದಾನನಾಗಿದೆ. ಕನ್ನಡ-ಕನ್ನಡಿಗ-ಕರ್ನಾಟಕದ ಅಸ್ಮಿತೆಗೆ ಧಕ್ಕೆಯಾಗುತ್ತಿದೆ ಎಂದರು.

ಭಾರತದ ಬಲಿಷ್ಠ ಬ್ಯಾಂಕ್‍ಗಳನ್ನು ಕಟ್ಟಿದವರು ಕರ್ನಾಟಕದವರು. ಆದರೆ, ಈಗಿನ ಕೆಂದ್ರ ಸರಕಾರ ಇಡೀ ಬ್ಯಾಂಕ್‍ಗಳನ್ನು ಅಪೋಶನ ತೆಗೆದುಕೊಂಡು ಕರ್ನಾಟಕದಲ್ಲಿ ಹಿಂದಿ ಭಾಷೆಯ ಯಜಮಾನಿಕೆ ಸ್ಥಾಪಿಸಲಾಗಲು ಹವಣಿಸುತ್ತಿವೆ ಎಂದು ಪಾರ್ವತೀಶ ಬಿಳಿದಾಳೆ ತಿಳಿಸಿದರು.

ಈ ವೇಳೆಯಲ್ಲಿ ವಿದ್ಯಾರ್ಥಿಗಳಿಂದ ಭರತ ನಾಟ್ಯ ಸೇರಿದಂತೆ ವಿವಿಧ ಸಾಂಸ್ಕೃ ತಿಕ ಕಾರ್ಯಕ್ರಮಗಳು, ಭಾವಗೀತೆಗಳ ಗಾಯನ ನಡೆದವು. ಜೊತೆಗೆ, ವಿವಿಧ ವಿಚಾರ ಗೋಷ್ಠಿಗಳು ಜರುಗಿದವು.

ಕಾರ್ಯಕ್ರಮದಲ್ಲಿ ಸುಪ್ರೀಂ ಕೋರ್ಟ್ ವಿಶ್ರಾಂತ ನ್ಯಾಯಾಧೀಶ ನ್ಯಾ.ವಿ.ಗೋಪಾಲಗೌಡ, ಕೆಆರ್‌ಎಸ್ ಪಕ್ಷದ ಗೌರವಾಧ್ಯಕ್ಷ ರವಿಕೃಷ್ಣಾರೆಡ್ಡಿ, ಹಿರಿಯ ಚಿಂತಕ ಹಾಗೂ ಜಾಣಗೆರೆ-75 ಅಭಿನಂದನಾ ಸಮಿತಿಯ ಅಧ್ಯಕ್ಷ ಡಾ.ಬಂಜಗೆರೆ ಜಯಪ್ರಕಾಶ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

‘ಕನ್ನಡ ಸಾಹಿತ್ಯ ಎಂದೂ ಮೂಲಭೂತವಾದಿಯಲ್ಲ..’

ಕನ್ನಡ ಸಾಹಿತ್ಯ ಎಂದೂ ಮೂಲಭೂತವಾದಿಯಲ್ಲ. ನಮ್ಮೆಲ್ಲರ ಮಾರ್ಗದರ್ಶಕರಾದ ಕುವೆಂಪು ಎಂದಿಗೂ ಮೂಲಭೂತವಾದಿತನದ ಕನಸನ್ನೂ ಕಂಡವರಲ್ಲ. ನಮಗೆಲ್ಲ ಅವರು ಅನಿಕೇತನದ ಬದುಕನ್ನು ಹೇಳಿಕೊಟ್ಟರು. ಆದರೆ, ಇಂದು ಕನ್ನಡ ಸಾಹಿತ್ಯ ಪರಿಷತ್ತಿಗೂ ಮೂಲಭೂತವಾದಿತನ ಅಂಟಿಕೊಂಡು ಪರಿಷತ್ತಿನ ಪರಂಪರೆಗೆ ಧಕ್ಕೆ ಉಂಟುಮಾಡಲಾಗಿದೆ ಎಂದು ಎಲ್.ಹನುಮಂತಯ್ಯ ಬೇಸರ ವ್ಯಕ್ತಪಡಿಸಿದರು.

Tags

L. Hanumanthaiah
share
ವಾರ್ತಾಭಾರತಿ
ವಾರ್ತಾಭಾರತಿ
Next Story
X