ಬೆಂಗಳೂರಿನಲ್ಲಿ ಅಜಾಗರೂಕತೆಯಿಂದ ಲ್ಯಾಂಬೋರ್ಗಿನಿ ಕಾರು ಚಾಲನೆ; ವಿಡಿಯೋ ಆಧರಿಸಿ ಸ್ವಯಂಪ್ರೇರಿತ ಎಫ್ಐಆರ್ ದಾಖಲು

Screengrab: X
ಬೆಂಗಳೂರು: ನಗರದಲ್ಲಿರುವ ಮೈಸೂರು ರಸ್ತೆಯಲ್ಲಿ ಲ್ಯಾಂಬೋರ್ಗಿನಿ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ‘ಸನಾತನ’ ಎಂಬ ಖಾತೆಯಿಂದ ಹಂಚಿಕೆಯಾಗಿದ್ದ ಈ ವಿಡಿಯೋವನ್ನು ಆಧರಿಸಿ ಕೆಂಗೇರಿ ಸಂಚಾರ ಪೊಲೀಸರು ಸ್ವಯಂ ಪ್ರೇರಿತ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಕೆಂಗೇರಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ರಾಮಸ್ವಾಮಿ ಆರ್ ಅವರು ಸಾಮಾಜಿಕ ಜಾಲತಾಣವಾದ ‘ಎಕ್ಸ್’ ಪರಿಶೀಲಿಸುತ್ತಿದ್ದಾಗ, ಸನಾತನ ಎಂಬ ಖಾತೆಯಿಂದ ಹಂಚಿಕೆಯಾಗಿದ್ದ ವಿಡಿಯೋದಲ್ಲಿ, ಹಸಿರು ಬಣ್ಣದ ಲ್ಯಾಂಬೋರ್ಗಿನಿ ಹುರಾಕಾನ್ ಕಾರು, ರಾಜರಾಜೇಶ್ವರಿ ನಗರ ಆರ್ಚ್ ಬಳಿ ಮೈಸೂರು ರಸ್ತೆಯತ್ತ ಅಪಾಯಕಾರಿ ರೀತಿಯಲ್ಲಿ ಚಲಿಸುತ್ತಿರುವುದು ಕಂಡುಬಂದಿದೆ. ಇದನ್ನು ಅಧಾರಿಸಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಕಾರಿಗೆ ದೋಷಪೂರಿತ ಸೈಲೆನ್ಸರ್ ಅಳವಡಿಸಿಕೊಂಡು ಮಾನವ ಜೀವಕ್ಕೆ ಅಪಾಯ ಉಂಟು ಮಾಡುವ ರೀತಿಯಲ್ಲಿ ಕಾರನ್ನು ಚಲಾಯಿಸಿರುವುದು ಸ್ಪಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಕಾರಿನ ಚಾಲಕನ ವಿರುದ್ಧ ಅಜಾಗರೂಕ ಹಾಗೂ ಅಪಾಯಕಾರಿ ಚಾಲನೆ ಆರೋಪದಲ್ಲಿ ಎಫ್ಐಆರ್ ದಾಖಲಾಗಿದೆ. ಸದ್ಯ ಕಾರಿನ ನೋಂದಣಿ ವಿವರಗಳು ಮತ್ತು ಚಾಲಕನ ಗುರುತು ಪತ್ತೆಹಚ್ಚುವ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
Driver of a green #Lamborghini Huracan in #Bengaluru has been booked for rash driving on Mysuru Road near Kengeri. @DCPTrWestBCP Anoop Shetty has confirmed an FIR has been registered. Efforts are on to trace the suspect. @DeccanHerald pic.twitter.com/QpZ7eV62Wz
— Prajwal D'Souza (@prajwaldza) January 20, 2026







