ದಾರುಲ್ ಉಲೂಮ್ ಸಬೀಲುರ್ರಶಾದ್ ನೂತನ ಮುಖ್ಯಸ್ಥರಾಗಿ ಮೌಲಾನಾ ಮುಫ್ತಿ ಅಹ್ಮದ್ ಸಿಮಾಲ್ ರಶಾದಿ ನೇಮಕ

ಬೆಂಗಳೂರು: ದಾರುಲ್ ಉಲೂಮ್ ಸಬೀಲುರ್ರಶಾದ್(ಅರೇಬಿಕ್ ಕಾಲೇಜು)ನ ನೂತನ ಮುಖ್ಯಸ್ಥರಾಗಿ ಮೌಲಾನಾ ಮುಫ್ತಿ ಅಹ್ಮದ್ ಸಿಮಾಲ್ ರಶಾದಿ ಅವರನ್ನು ಆಯ್ಕೆ ಮಾಡಲಾಗಿದೆ.
ಅಮೀರೆ ಶರೀಅತ್ ಮೌಲಾನಾ ಸಗೀರ್ ಅಹ್ಮದ್ ಖಾನ್ ರಶಾದಿ ಅವರ ನಿಧನದ ಹಿನ್ನೆಲೆಯಲ್ಲಿ ತೆರವಾಗಿದ್ದ ಸ್ಥಾನಕ್ಕೆ ಅವರನ್ನು ಆಯ್ಕೆ ಮಾಡಲಾಗಿದೆ.
ಮೌಲಾನಾ ಅಹ್ಮದ್ ಸಿಮಾಲ್ ರಶಾದಿ ಅವರು ರಾಜ್ಯದ ದ್ವಿತೀಯ ಅಮೀರೆ ಶರೀಅತ್ ಆಗಿದ್ದ ಮುಫ್ತಿ ಮುಹಮ್ಮದ್ ಅಶ್ರಫ್ ಅಲಿ ಅವರ ಕಿರಿಯ ಪುತ್ರರಾಗಿದ್ದಾರೆ.
ಮುಫ್ತಿ ಮುಹಮ್ಮದ್ ಅಶ್ರಫ್ ಅಲಿ ಅವರ ನಿಧನದ ನಂತರ ಮೌಲಾನಾ ಸಗೀರ್ ಅಹ್ಮದ್ ಖಾನ್ ಅವರನ್ನು ಸಬೀಲುರ್ರಶಾದ್ ನ ಮೊಹತಮೀಮ್(ಪ್ರಾಂಶುಪಾಲ/ಮುಖ್ಯಸ್ಥ) ರನ್ನಾಗಿ ಹಾಗೂ ಮುಫ್ತಿ ಅಹ್ಮದ್ ಸಿಮಾಲ್ ಅವರನ್ನು ಉಪ ಮುಖಸ್ಥರನ್ನಾಗಿ ನಿಯೋಜಿಸಲಾಗಿತ್ತು.
ಇದೀಗ ಮೌಲಾನಾ ಸಗೀರ್ ಅಹ್ಮದ್ ಅವರ ನಿಧನದ ಬಳಿಕ ಮುಫ್ತಿ ಅಹ್ಮದ್ ಸಿಮಾಲ್ ಅವರನ್ನು ನೂತನ ಮುಖ್ಯಸ್ಥರನ್ನಾಗಿ ಆಯ್ಕೆ ಮಾಡಲಾಗಿದೆ.
Next Story





