ಪರಪ್ಪನ ಅಗ್ರಹಾರ ಜೈಲಿನಲ್ಲಿ ನಿಷೇಧಿತ ವಸ್ತುಗಳು ಪತ್ತೆ; ಆರು ಎಫ್‍ಐಆರ್ ದಾಖಲು

ಬೆಂಗಳೂರು: ಇಲ್ಲಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಮಂಗಳವಾರ ರಾತ್ರಿ ಜೈಲಾಧಿಕಾರಿಗಳು ತಪಾಸಣೆ ನಡೆಸಿದ್ದು, ನಿಷೇಧಿತ ವಸ್ತುಗಳು ಪತ್ತೆಯಾಗಿವೆ. ಈ ಸಂಬಂಧ ಒಟ್ಟು 6 ಎಫ್‍ಐಆರ್ ದಾಖಲಾಗಿವೆ ಎಂದು ವರದಿಯಾಗಿದೆ.
ತಪಾಸಣೆ ವೇಳೆ ಒಂದೇ ದಿನದಲ್ಲಿ 14 ಮೊಬೈಲ್ ಫೋನ್‍ಗಳು, 9 ಸಿಮ್ ಕಾರ್ಡ್‍ಗಳು, 5 ಮೊಬೈಲ್ ಫೋನ್ ಚಾರ್ಜರ್, 2 ಇಯರ್ ಫೋನ್, ವಿವಿಧ ಬಗೆಯ ಚಾಕುಗಳು ಪತ್ತೆಯಾಗಿವೆ. ನ.26ರಿಂದ ಇದುವರೆಗೂ ಒಟ್ಟಾರೆ 67 ಮೊಬೈಲ್ ಫೋನ್‍ಗಳು, 14 ಚಾರ್ಜರ್ಸ್, 48 ಸಿಮ್ ಕಾರ್ಡ್‍ಗಳು, 10 ಇಯರ್ ಫೋನ್‍ಗಳು, 60,880 ರೂ. ನಗದು, 10 ಹರಿತವಾದ ಆಯುಧಗಳು ಪತ್ತೆಯಾಗಿವೆ.
Next Story





