ಹಿರಿಯ ಪತ್ರಕರ್ತ ಡಿ.ಉಮಾಪತಿ ಅವರಿಗೆ ʼರಾಜ್ಯೋತ್ಸವ ಪ್ರಶಸ್ತಿʼ

ಬೆಂಗಳೂರು : ಹಿರಿಯ ಪತ್ರಕರ್ತ ಹಾಗೂ ಅಂಕಣಕಾರರೂ ಆಗಿರುವ ಡಿ.ಉಮಾಪತಿ ಅವರ ಪತ್ರಿಕೋದ್ಯಮದಲ್ಲಿನ ಸುದೀರ್ಘ ಸೇವೆಯನ್ನು ರಾಜ್ಯ ಸರಕಾರವು ಗುರುತಿಸಿದ್ದು, ಅವರನ್ನು ಪ್ರತಿಷ್ಠಿತ ‘ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ’ಗೆ ಆಯ್ಕೆ ಮಾಡಿದೆ.
ಚಿತ್ರದುರ್ಗ ಮೂಲದ ಡಿ.ಉಮಾಪತಿ ಅವರು, ಶೋಷಿತ ಸಮುದಾಯದ ಹಿನ್ನೆಲೆಯಿಂದ ಬಂದು ಪತ್ರಿಕೋದ್ಯಮದಲ್ಲಿ ಸುದೀರ್ಘ ಅನುಭವ ಹೊಂದಿದ್ದಾರೆ. ರಾಜ್ಯದ ಪ್ರಮುಖ ದಿನಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿರುವ ಉಮಾಪತಿ ಅವರು, ಜನಪರ ಹೋರಾಟ ಮತ್ತು ಪತ್ರಿಕೋದ್ಯಮ ಕ್ಷೇತ್ರದಲ್ಲಿ ಎಲ್ಲರಗೂ ಅತ್ಯಂತ ಅಪರಿಚಿತರಾಗಿದ್ದಾರೆ.
ಸಂಸತ್ ಕಲಾಪ, ರಾಷ್ಟ್ರಮಟ್ಟದ ರಾಜಕೀಯ ಬೆಳವಣಿಗೆಗಳು, ಚುನಾವಣೆಗಳು, ನದಿ ನೀರಿನ ವಿವಾದಗಳು ಮತ್ತು ರಾಜತಾಂತ್ರಿಕ ಬೆಳವಣಿಗೆಗಳ ವರದಿಗಾರಿಕೆಯಲ್ಲಿ ಗಾಢವಾದ ಅನುಭವ ಹೊಂದಿದ್ದಾರೆ. ಸಂಯುಕ್ತ ಕರ್ನಾಟಕ, ಪ್ರಜಾವಾಣಿ, ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದ ಅವರು ಸಾಮಾಜಿಕ ಕಳಕಳಿ ಹೊಂದಿದ್ದದನ್ನು ತಮ್ಮ ವರದಿಗಾರಿಕೆಯಲ್ಲಿ ತೋರ್ಪಡಿಸಿದ್ದಾರೆ.
ಡಿ.ಉಮಾಪತಿ ಅವರಿಗೆ, ಪ್ರತಿಷ್ಠಿತ ಕರ್ನಾಟಕ ಮಾಧ್ಯಮ ಅಕಾಡಮಿ ಪ್ರಶಸ್ತಿ, ಬಾಬಾ ಸಾಹೇಬ್ ಅಂಬೇಡ್ಕರ್ ದತ್ತಿ ಪ್ರಶಸ್ತಿ, ವಡ್ಡರ್ಸೆ ರಘುರಾಮ ಶೆಟ್ಟಿ ಸಾಮಾಜಿಕ ನ್ಯಾಯ ಪತ್ರಿಕೋದ್ಯಮ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ.






